ಮೂರನೇ ರೇಪ್ ಕೇಸ್‍ನಲ್ಲಿ ಪ್ರಜ್ವಲ್‍ಗೆ ಮತ್ತೆ 5 ದಿನ ಪೊಲೀಸ್ ಕಸ್ಟಡಿ

Public TV
1 Min Read

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೈಲು ಪಾಲಾಗಿದ್ದಾರೆ. ಆದರೆ ಪ್ರಜ್ವಲ್ ವಿರುದ್ಧದ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಎಸ್‍ಐಟಿ ಅಧಿಕಾರಿಗಳು ಮತ್ತೆ 5 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈಗಾಗಲೇ ಎರಡು ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಎಸ್‍ಐಟಿ (SIT) ಇದೀಗ ಮೂರನೇ ಪ್ರಕರಣದಲ್ಲಿ ಕಸ್ಟಡಿಗೆ ಪಡೆದುಕೊಂಡಿದೆ. ಜಿಲ್ಲಾ ಪಂಚಾಯತ್ ಸದಸ್ಯೆ ನೀಡಿದ ದೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.

ನಿನ್ನೆಯಷ್ಟೆ 2ನೇ ಕೇಸ್‍ನಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 42ನೇ ಎಸಿಎಂಎಂ ಕೋರ್ಟ್‍ನ ನ್ಯಾ ಸಂತೋಷ್ ಗಜಾನನ ಭಟ್ ಆದೇಶಿಸಿದ್ದರು. ಅದರಂತೆ ಪ್ರಜ್ವಲ್‍ರನ್ನು ಜೈಲಿಗೆ ಕಳಿಸಲಾಗಿತ್ತು. ಜಾಮೀನು ಕೋರಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದು ಜೂನ್ 24ಕ್ಕೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಈ ಮಧ್ಯೆ ಇಂದು ಎಸ್‍ಐಟಿ ಪ್ರಜ್ವಲ್ ವಿರುದ್ಧದ 3ನೇ ಅತ್ಯಾಚಾರ ಕೇಸ್‍ನಲ್ಲಿ ಕಸ್ಟಡಿಗೆ ಪಡೆದಿದೆ. ಇದನ್ನೂ ಓದಿ: ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಜೂ.24ಕ್ಕೆ ಮುಂದೂಡಿಕೆ

Share This Article