ಪ್ರಜ್ವಲ್ ಬರ್ತ್ ಡೇಗೆ ಇನ್‌ಸ್ಪೆಕ್ಟರ್‌ ವಿಕ್ರಮ್ ಸ್ಪೆಷಲ್ ಟೀಸರ್!

Public TV
1 Min Read

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರವೀಗ ಟೀಸರ್ ಕಾರಣದಿಂದ ಸಖತ್ ಸುದ್ದಿ ಮಾಡುತ್ತಿದೆ. ಈ ಸಿನಿಮಾ ಮೂಲಕವೇ ಪ್ರಜ್ವಲ್ ವೃತ್ತಿ ಬದುಕಿನ ಮಹತ್ವದ ಮೈಲಿಗಲ್ಲಾಗುವಂಥಾ ಸೂಚನೆಗಳೇ ದಟ್ಟವಾಗಿವೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಹೆಚ್ಚಿನ ವೀಕ್ಷಣೆಯೊಂದಿಗೆ ಪ್ರೇಕ್ಷಕರನ್ನ ತಲುಪಿಕೊಂಡಿತ್ತು. ಇದೀಗ ಜುಲೈ ಮೂರನೇ ತಾರೀಕು ಮಧ್ಯರಾತ್ರಿ ಮತ್ತೊಂದು ವಿಶೇಷ ಟೀಸರ್ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಹೀಗೆ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರತಂಡ ತರಾತುರಿಯಿಂದ ಮತ್ತೊಂದು ಟೀಸರ್ ಬಿಡುಗಡೆಗೆ ಮುಂದಾಗಿರೋದರ ಹಿಂದೆ ಪ್ರಜ್ವಲ್ ದೇವರಾಜ್ ಅವರಿಗೆ ಬರ್ತ್‍ಡೇ ಗಿಫ್ಟು ಕೊಡುವ ಇರಾದೆ ಇದೆ. ಜೂನ್ 4ನೇ ತಾರೀಕು ಪ್ರಜ್ವಲ್ ಹುಟ್ಟಿದ ದಿನ. ಆದ್ದರಿಂದ ಜುಲೈ 3ನೇ ತಾರೀಕಿನ ನಡು ರಾತ್ರಿಯೇ ಈ ವಿಶೇಷವಾದ ಟೀಸರ್ ಬಿಡುಗಡೆಗೊಳ್ಳಲಿದೆಯಂತೆ.

ವಿಖ್ಯಾತ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಶ್ರೀ ನರಸಿಂಹ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಜಾಕಿ ಖ್ಯಾತಿಯ ಭಾವನಾ ಈ ಚಿತ್ರದ ಮೂಲಕ ಮೊದಲ ಸಲ ಪ್ರಜ್ವಲ್ ಜೋಡಿಯಾಗಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅತಿಥಿ ಪಾತ್ರವೊಂದರ ಮೂಲಕ ಸಾಥ್ ಕೊಟ್ಟಿರೋದು ಈ ಸಿನಿಮಾ ಬಗೆಗಿನ ನಿರೀಕ್ಷೆ ಮತ್ತಷ್ಟು ಗರಿಗೆದರುವಂತೆ ಮಾಡಿದೆ.

ಇದೇ ಹೊತ್ತಿನಲ್ಲಿ ಪ್ರಜ್ವಲ್ ದೇವರಾಜ್ ಅವರ ಮುಂದೆ ಅಪರೂಪ ಅನ್ನಿಸುವಂಥಾ ಸಾಲು ಸಾಲು ಅವಕಾಶಗಳಿವೆ. ಒಂದು ಚಿತ್ರ ಚಿತ್ರೀಕರಣದ ಹಂತದಲ್ಲಿರುವಾಗಲೇ ಮತ್ತೊಂದು ಹೊಸಾ ಆಫರ್ ಅವರನ್ನು ಅರಸಿ ಬರುತ್ತಿದೆ. ಹೀಗೆ ಮದುವೆಯ ನಂತರದಲ್ಲಿ ಅವರ ವೃತ್ತಿ ಜೀವನ ಅಚ್ಚರಿದಾಯಕವಾಗಿ ಟೇಕಾಫ್ ಆಗಿದೆ. ಅವರ ಹಿಟ್ ಯಾನ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರದಿಂದಲೇ ಶುರುವಾಗೋ ಲಕ್ಷಣಗಳೇ ಢಾಳಾಗಿವೆ.

Share This Article
Leave a Comment

Leave a Reply

Your email address will not be published. Required fields are marked *