ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲು

Public TV
1 Min Read

ಕಿರುತೆರೆ ಹಿರಿಯ ನಟಿ ಶಶಿಕಲಾ (Shashikala) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಶಶಿಕಲಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶಶಿಕಲಾ ವಿರುದ್ಧ ‘ಪ್ರಜಾರಾಜ್ಯ’ ಚಿತ್ರದ ನಿರ್ದೇಶಕ ಹರ್ಷವರ್ಧನ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿದ್ದು, ದೂರವಿದ್ದರೂ ಕೂಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ.

ಸಿನಿಮಾಗೆ ಹಣ ಹೂಡಿಕೆ ಮಾಡೋದಾಗಿ ನನ್ನನ್ನು ನಂಬಿಸಿ ಮದುವೆಯಾದರು. ಮದುವೆಯ ಬಳಿಕ ಯಾವುದಾದರೂ ವಿಚಾರಕ್ಕೆ ಪ್ರಶ್ನೆ ಮಾಡಿದಂತಹ ಸಂದರ್ಭದಲ್ಲಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಹರ್ಷವರ್ಧನ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹರ್ಷವರ್ಧನ್ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ವಿದ್ಯಾರಣ್ಯಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article