Father’s Day: ಮಕ್ಕಳ ಜೊತೆಯಿರುವ ರಿಷಬ್ ಸ್ಪೆಷಲ್ ಫೋಟೋ ಹಂಚಿಕೊಂಡ ಪ್ರಗತಿ ಶೆಟ್ಟಿ

Public TV
1 Min Read

ವಿಶ್ವ ಅಪ್ಪಂದಿರ ದಿನವಾಗಿರೋ ಕಾರಣ, ಸೆಲೆಬ್ರಿಟಿಗಳು ತಂದೆ ಜೊತೆಗಿನ ವಿಶೇಷ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇದೀಗ ನಟ ರಿಷಬ್ ಅವರು ಮಕ್ಕಳ ಜೊತೆಯಿರೋ ಫೋಟೋವನ್ನ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌

‘ಕಾಂತಾರ’ (Kantara) ಸಿನಿಮಾದಿಂದ ಪ್ಯಾನ್ ಸ್ಟಾರ್ ಆಗಿ ಮಿಂಚ್ತಿರುವ ನಟ ರಿಷಬ್ ಶೆಟ್ಟಿ (Rishab Shetty) ಅವರು ಫ್ಯಾಮಿಲಿಗೂ (Family) ಸಮಯ ಮೀಸಲಿಡುತ್ತಾರೆ. ಕಾಂತಾರ ಚಿತ್ರದ ಸಕ್ಸಸ್ ನಂತರ ಕುಟುಂಬದ ಕಡೆ ಗಮನ ಕೊಡುತ್ತಿದ್ದರು. ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ತಮ್ಮ ಹುಟ್ಟೂರು ಕುಂದಾಪುರಕ್ಕೂ ನಟ ಭೇಟಿ ನೀಡಿದ್ದರು. ಈಗ ವಿಶ್ವ ಅಪ್ಪಂದಿರ ದಿನದಂದು ಪ್ರಗತಿ ಶೆಟ್ಟಿ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

ವಿಶ್ವದ ಕೂಲೆಸ್ಟ್ ಅಪ್ಪನಿಗೆ ತಂದೆಯರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ, ಬೆಂಬಲ ಮತ್ತು ಸಮರ್ಪಣಾ ಮನೋಭಾವವು ಪ್ರತಿದಿನವೂ ಅದ್ಭುತ ಅನುಭವ ನೀಡಿದೆ. ಬೆಸ್ಟ್ ಪತಿ ಮತ್ತು ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ಪಕ್ಕದಲ್ಲಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿ ಎಂದು ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಾಂತಾರ’ ಪಾರ್ಟ್ 2 ಸಿನಿಮಾಗಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ. ಸ್ಕ್ರಿಪ್ಟ್ ರೆಡಿಯಾಗಿದ್ದು, ಇದೇ ಆಗಸ್ಟ್ 27ರಿಂದ ಚಿತ್ರೀಕರಣ ಶುರುವಾಗಲಿದೆ. ಕಾಂತಾರ ಪಾರ್ಟ್ 2ಗೆ ತೆರೆಮರೆಯಲ್ಲಿ ರಿಷಬ್ ಶೆಟ್ಟಿ ಭರ್ಜರಿ ತಯಾರಿ ಮಾಡಿದ್ದಾರೆ.

Share This Article