ಮುಂಬೈನಿಂದ ಸ್ಯಾಂಡಲ್ ವುಡ್ ಗೆ ಬಂದ ಪ್ರಾಚಿ ಶರ್ಮಾ

Public TV
1 Min Read

ನ್ನಡ ಚಿತ್ರ ರಂಗಕ್ಕೆ ಮುಂಬೈ (Mumbai) ಮೂಲದ ನಾಯಕಿಯರ ಪ್ರವೇಶ ಹೊಸದೇನೂ ಅಲ್ಲ. ಈಗ ಕನ್ನಡದ ‘ರೆಡ್ರಮ್’ (Redrum) ಚಿತ್ರದ ಮೂಲಕ ಮುಂಬೈ ಪ್ರತಿಭೆ ಪ್ರಾಚಿ ಶರ್ಮಾ  (Prachi Sharma) ಸ್ಯಾಂಡಲ್ ವುಡ್ ಗೆ (Sandalwood) ಪಾದಾರ್ಪಣೆ ಮಾಡಿದ್ದಾರೆ.

ತೆಲುಗಿನ ‘ಜಿಲ್ಲಾ ಪರಿಷತ್ ಉನ್ನತ ಪಾಠಶಾಲಾ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಅನುಭವವಿರುವ ಪ್ರಾಚಿ ಶರ್ಮಾ, ಈಗ ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ನಿರ್ಮಾಣದ ರೆಡ್ರಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಮಹತ್ವದ ಪಾತ್ರವಾಗಿದೆ ಎಂದಿದೆ ನಿರ್ಮಾಣ ಸಂಸ್ಥೆ. ಇದನ್ನೂ ಓದಿ:ಯೋಗಾಭ್ಯಾಸದ ವೀಡಿಯೋದಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ರಾಗಿಣಿ

ಕನ್ನಡ ಭಾಷೆಯನ್ನು ಬೇಗ ಕಲಿಯುತ್ತಿರುವ ಪ್ರಾಚಿ ಶರ್ಮಾ, ಆಗಲೇ ಸ್ವಾತಿ ನಕ್ಷತ್ರ  ಎಂಬ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ. ಇದಲ್ಲದೆ ಇನ್ನೊಂದು ಹೆಸರಿಡದ ಬಹು ತಾರಾಗಣದ, ದೊಡ್ಡ ಬಜೆಟ್ ನ ಚಿತ್ರಕ್ಕೆ ಕೂಡ ಆಯ್ಕೆ ಆಗಿದ್ದಾರೆ.

ಹಾಗೆ, ಹಲವು ಚಿತ್ರಗಳಿಗೆ ಮಾತುಕತೆ ಸಹ ನಡೆಯುತ್ತಿದೆ ಎಂದು ಪ್ರಾಚಿ ಶರ್ಮಾ ತಿಳಿಸಿದ್ದಾರೆ. ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತ್ತರುವ ಈ ಸಮಯದಲ್ಲಿ ಪ್ರಾಚಿ ಶರ್ಮ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ.

Share This Article