ಪ್ರಭು ಚೌಹಾಣ್ ಪುತ್ರ ಯುವತಿಗೆ ವಂಚನೆ ಆರೋಪ – ಇಬ್ಬರೂ ಒಂದೇ ರೂಮ್‌ನಲ್ಲಿದ್ದ ಬಗ್ಗೆ ಸಾಕ್ಷಿ ಬಿಡುಗಡೆ

Public TV
1 Min Read

ಬೆಂಗಳೂರು: ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ಪುತ್ರನ ವಿರುದ್ಧ ನಂಬಿಸಿ ವಂಚನೆ ಆರೋಪ ಮಾಡಿದ್ದ ಯುವತಿ, ಆರೋಪ ಸಂಬಂಧ ಒಂದೇ ರೂಮ್‌ನಲ್ಲಿ ಪ್ರತೀಕ್ (Pratheek Chauhan) ಮತ್ತು ತಾನು ಇದ್ದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾಳೆ.

ಶನಿವಾರವಷ್ಟೇ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಭೇಟಿಯಾಗಿ ಸಂತ್ರಸ್ತೆ ದೂರು ಸಲ್ಲಿಕೆ ಮಾಡಿದ್ದರು. ಆ ಬೆನ್ನಲ್ಲೆ ಈಗ ಪ್ರತೀಕ್ ಮತ್ತು ಯುವತಿ ಜೊತೆಗಿದ್ದ ಹೊಟೇಲ್ ರೂಮ್‌ಗಳ ದಾಖಲಾತಿಯನ್ನ ಬಿಡುಗಡೆ ಮಾಡಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ಆಗಿತ್ತು. ನಿಶ್ಚಿತಾರ್ಥಕ್ಕೂ ಮುನ್ನ ಆಕ್ಟೋಬರ್‌ನಲ್ಲೇ ಸಂತ್ರಸ್ತೆ ಮತ್ತು ಪ್ರತೀಕ್ ಚೌಹಾಣ್ ಬೆಂಗಳೂರಿನ ರೇಸ್‌ಕೋರ್ಸ್ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಒಟ್ಟಾಗಿ ಇದ್ದರು. ಆದಾದ ಬಳಿಕ ಅದೇ ವರ್ಷ ಡಿಸೆಂಬರ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ಆಗಿದೆ. ಇದನ್ನೂ ಓದಿ: ಮೈಸೂರು | ಕಬಿನಿ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ – ನಾಡಿನ ಒಳಿತಿಗೆ ಪ್ರಾರ್ಥನೆ

ನಂತರ 2024ರ ಮಾರ್ಚ್ನಲ್ಲೂ ಈ ಇಬ್ಬರು ಒಟ್ಟಾಗಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಒಂದೇ ರೂಮ್‌ನಲ್ಲಿ ಕಾಲ ಕಳೆದಿದ್ದಾರೆ. ಪ್ರತೀಕ್ ನನ್ನ ದೈಹಿಕವಾಗಿ ಬಳಸಿಕೊಂಡು ಮದುವೆಯಾಗದೆ ವಂಚಿಸಿದ್ದಾನೆ ಎಂಬ ಆರೋಪಕ್ಕೆ ಪೂರಕವಾಗಿ ಸಂತ್ರಸ್ತೆ ಈ ದಾಖಲೆ ಬಿಡುಗಡೆ ಮಾಡಿದ್ದಾರೆ. ಎರಡು ದಿನದ ಹಿಂದೆ ಪ್ರಭು ಚೌಹಾನ್ ನನ್ನ ಮಗ ಆ ರೀತಿ ಯುವತಿಯನ್ನ ಮಿಸ್ ಯೂಸ್ ಮಾಡಿಕೊಂಡಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು. ಈ ಬೆನ್ನಲ್ಲೇ ಯುವತಿ ಆರೋಪ ಸಂಬಂಧ ದಾಖಲೆಯನ್ನ ಬಿಡುಗಡೆ ಮಾಡಿದ್ದಾಳೆ. ಇದನ್ನೂ ಓದಿ:  ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

Share This Article