ಶಾರುಖ್ ಖಾನ್ ಚಿತ್ರಕ್ಕೆ ಸೆಡ್ಡು ಹೊಡೆಯುತ್ತಾ ಪ್ರಭಾಸ್ ಸಲಾರ್

Public TV
1 Min Read

ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಲಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳು ಹೇಳಿಕೊಳ್ಳದೇ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಅಧಿಕೃತ ಎನ್ನುವಂತೆ ಹರಿದಾಡುತ್ತಿದೆ.

ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು  ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆಯಂತೆ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ

ಅಂದುಕೊಂಡಂತೆ ಆಗಿದ್ದರೆ, ಸೆಪ್ಟೆಂಬರ್ 28ರಂದು ಸಲಾರ್ (Salaar) ಸಿನಿಮಾ ರಿಲೀಸ್ ಆಗಬೇಕಿತ್ತು. ಈ ದಿನಾಂಕವನ್ನು ಘೋಷಿಸಿಯೂ ಆಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ರಿಲೀಸ್ ಆಗಲಿಲ್ಲ. ಮುಂದಿನ ದಿನಾಂಕವನ್ನೂ ಹೊಂಬಾಳೆ ಫಿಲ್ಮ್ಸ್ ಘೋಷಿಸಿಲ್ಲ. ಇದೇ ತಿಂಗಳು 29ರಂದು ಹೊಸ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಡಿಸೆಂಬರ್ 22 ತಾರೀಖನ್ನೇ ಸಂಸ್ಥೆ ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

 

ಈಗಾಗಲೇ ಒಂದರ ಹಿಂದೆ ಒಂದು ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ ಶಾರುಖ್ ಖಾನ್, ಪಠಾಣ್ ಮತ್ತು ಜವಾನ್ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ. ಈ ಗೆಲುವಿನ ನಂತರ ಡಂಕಿ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಹೊತ್ತಲ್ಲಿ ಸಲಾರ್ ಸಿನಿಮಾ ಕೂಡ ರಿಲೀಸ್ ( Release) ಆಗಲಿದೆಯಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್