ನಿರ್ದೇಶಕ ಪ್ರಶಾಂತ್ ನೀಲ್ ಹೊಗಳಿದ ಪ್ರಭಾಸ್

Public TV
2 Min Read

ಲಾರ್ ಸಿನಿಮಾ ರಿಲೀಸ್ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಹಾಡಿಹೊಗಳಿದ್ದಾರೆ ನಟ ಪ್ರಭಾಸ್. ನಿರ್ದೇಶಕರ ಕಾರ್ಯ ವೈಖರಿಗೆ ಪ್ರಭಾಸ್ ಫಿದಾ ಆಗಿದ್ದಾರೆ. ಪ್ರಶಾಂತ್ ಜೊತೆ ಕೆಲಸ ಮಾಡಲು ಯಾವಾಗಲೂ ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಇಡೀ ವಿಶ್ವವೇ ಇದರತ್ತ ನೋಡುತ್ತಿದೆ. ಮೂರು ವರ್ಷದಿಂದ ಕಾಯುತ್ತಿದ್ದ ಗಳಿಗೆ ಹತ್ತಿರವಾಗಿದೆ. ಕಾರಣ ಸಲಾರ್ (Salaar) ಅಬ್ಬರಿಸಲು ಸಜ್ಜಾಗಿದೆ. ಈ ಹೊತ್ತಲ್ಲಿ ಹಲವು ರಹಸ್ಯ ಬಿಚ್ಚಿಟ್ಟಿದ್ದಾರೆ ಕ್ಯಾಮೆರಾಮನ್ ಭುವನ್ ಗೌಡ. ಯರ‍್ಯಾರೊ ಏನೇನೊ ಅಂದುಕೊಂಡಿದ್ದು ಸುಳ್ಳು. ಇದು ಸತ್ಯ ಎಂದು ಗುಡುಗಿದ್ದಾರೆ. ಏನಿದು ಸಲಾರ್ ಅಪರೂಪದ ಸಮಾಚಾರ ಇಲ್ಲಿದೆ ನೋಡಿ.

ಬರೀ ಪ್ರಭಾಸ್ (Prabhas) ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ಸಲಾರ್‌ಗಾಗಿ ಕಾಯುತ್ತಿದೆ. ಒಂದು ಕಡೆ ಪ್ರಶಾಂತ್ ನೀಲ್ ಏನು ಮಾಡಲಿದ್ದಾರೆ ಎನ್ನುವ ಕುತೂಹಲ ಇನ್ನೊಂದು ಕಡೆ ಪ್ರಭಾಸ್ ಕಾಂಬಿನೇಶನ್ ಹೆಂಗೆ ಕಿಕ್ ಏರಿಸುತ್ತದೆ ಎನ್ನುವ ಹಂಬಲ. ಎರಡೂ ಸೇರಿ ಸಲಾರ್‌ಗೆ ಭೂಮಿ ತೂಕದ ಬಲ ತಂದುಕೊಟ್ಟಿದೆ. ಈ ಹೊತ್ತಲ್ಲಿ ಕ್ಯಾಮೆರಾಮನ್ ಭುವನ್ ಗೌಡ (Bhuvan Gowda) ಹಲವು ರಹಸ್ಯ ಹರವಿಟ್ಟಿದ್ದಾರೆ. ಅದನ್ನು ಕೇಳಿ ಪ್ರಭಾಸ್ ಭಕ್ತಗಣ ರಣಕೇಕೆ ಹಾಕಿದೆ.

ಕೆಜಿಎಫ್ (KGF) ಚಿತ್ರಕ್ಕಿಂತ ಐದು ಪಟ್ಟು ದೊಡ್ಡದು ಸಲಾರ್. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇನ್ನೊಂದು ಫಿಲ್ಮ್ ಸಿಟಿ ನಿರ್ಮಿಸಿದಂತಾಗಿತ್ತು ನಾವು ಹಾಕಿದ ಸೆಟ್ಟುಗಳು. ನೂರು ಎಕರೆ ಪ್ರದೇಶದಲ್ಲಿ ಸೆಟ್ ನಿರ್ಮಿಸಲಾಗಿತ್ತು. ಇಂಡಿಯಾದ ಇತಿಹಾಸದಲ್ಲಿ ಇಷ್ಟು ದೊಡ್ಡ ಸೆಟ್ ನಿರ್ಮಿಸಿದ್ದು ಇಲ್ಲವೇ ಇಲ್ಲ. ಕೆಜಿಎಫ್ ಶೂಟ್ ಮಾಡಿದ್ದ ಸ್ಥಳದಲ್ಲಿ ಸಲಾರ್ ಶೂಟಿಂಗ್ ಮಾಡಿಲ್ಲ. ಅದು ಸುಳ್ಳು. ಶಿವಕುಮಾರ್ ಕಲಾ ನಿರ್ದೇಶನದಲ್ಲಿ ಹಿಂದೆಂದೂ ನೋಡದ ಕಾಣದ ಲೋಕ ತೋರಿಸಿದ್ದೇವೆ. ಕೋಟಿ ಕೋಟಿ ಸುರಿಯಲಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಲಾರ್ ಅದ್ಭುತ ಅಪರೂಪದ ಜಗತ್ತು ತೋರಿಸಲಿದೆ.

 

ಇಲ್ಲಿವರೆಗೆ ಇದನ್ನು ಯಾರೂ ಹೇಳಿರಲಿಲ್ಲ. ಈಗ ‘ಸಲಾರ್’ (Salaar) ಅಸಲಿ ಸತ್ಯ ಹೊರಬಿದ್ದಿದೆ. ಸುಮಾರು 200 ಕೋಟಿ ವೆಚ್ಚದಲ್ಲಿ ಹೊಂಬಾಳೆ ಸಂಸ್ಥೆ (Hombale Films) ಇದನ್ನು ನಿರ್ಮಿಸಿದೆ. ವಿಜಯ್ ಕಿರಗಂದೂರ್ ಮತ್ತೊಮ್ಮೆ ಕನ್ನಡ ಬಾವುಟವನ್ನು ದೇಶ ವಿದೇಶದಲ್ಲಿ ಹಾರಾಡಿಸಲು ಸಜ್ಜಾಗಿದ್ದಾರೆ. ಪ್ರಶಾಂತ್ ನೀಲ್ (Prashanth Neel) ಕೂಡ ಜನರ ಉತ್ತರಕ್ಕೆ ಕಾಯುತ್ತಿದ್ದಾರೆ. ಮೂರು ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್ ಕೈ ಜೋಡಿಸಿ ಕುಳಿತಿದ್ದಾರೆ.

Share This Article