‘ಬೇಡರ ಕಣ್ಣಪ್ಪ’ ತೆಲುಗು ರಿಮೇಕ್‌ನಲ್ಲಿ ಪ್ರಭಾಸ್

Public TV
1 Min Read

ಡಾ.ರಾಜ್‌ಕುಮಾರ್‌ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಹೊಸ ರೂಪದಲ್ಲಿ ‘ಭಕ್ತ ಕಣ್ಣಪ್ಪ’ ಸಿನಿಮಾವಾಗಿ ಮೂಡಿ ಬರಲಿದ್ದು, ಬಾಹುಬಲಿ ಪ್ರಭಾಸ್ (Prabhas) ಪ್ರಮುಖ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನೂ ಓದಿ:ಮಗು ಮಾಡಿಕೊಳ್ಳುವ‌ ಬಗ್ಗೆ ಪ್ಲ್ಯಾನ್ ಇಲ್ವಾ- ವಿಕ್ಕಿ ಕೌಶಲ್ ಹೇಳೋದೇನು?

1952ರಲ್ಲಿ ಡಾ.ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಿದ್ದರು. ಅಣ್ಣಾವ್ರು ಮಾಡಿದ್ದ ಪಾತ್ರವನ್ನೇ ಕೃಷ್ಣಂ ರಾಜು ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾ ಕೃಷ್ಣಂ ರಾಜು (Krishnam Raju) ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೇ ಸಿನಿಮಾವನ್ನು ಹೊಸ ವರ್ಷನ್‌ನಲ್ಲಿ ಪ್ರಭಾಸ್ ನಿರ್ಮಿಸುವ ಕನಸು ಅವರಿಗಿತ್ತು. ಆದರೆ ಕಳೆದ ವರ್ಷ ಅವರು ನಿಧನರಾದರು.

ಕಣ್ಣಪ್ಪ ಕುರಿತ ಸಿನಿಮಾದಲ್ಲಿ ನಟ ಪ್ರಭಾಸ್ ನಟಿಸುವುದು ಪಕ್ಕಾ ಆಗಿದೆ. ಆದರೆ ಅವರಿಲ್ಲಿ ಕಣ್ಣಪ್ಪನ ಪಾತ್ರ ಮಾಡುತ್ತಿಲ್ಲ. ಬದಲಿಗೆ, ಆ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ. ಹೌದು, ಕಣ್ಣಪ್ಪನ ಸಿನಿಮಾದಲ್ಲಿ ಪ್ರಭಾಸ್ ಅವರು ಶಿವನ ಪಾತ್ರ ಮಾಡಲಿದ್ದಾರೆ. ಈ ಮೂಲಕ ದೊಡ್ಡಪ್ಪನ ಕನಸನ್ನು ಪ್ರಭಾಸ್ ನನಸು ಮಾಡುತ್ತಿರೋದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಭಕ್ತ ಕಣ್ಣಪ್ಪ’ (Bhakta Kannappa) ಸಿನಿಮಾವನ್ನು ಹೊಸ ರೂಪದಲ್ಲಿ ನಟ ಮಂಚು ವಿಷ್ಣು (Manchu Vishnu) ನಿರ್ಮಾಣ ಮಾಡುತ್ತಿದ್ದಾರೆ. ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸಲಿದ್ದಾರೆ. 150 ಕೋಟಿ. ರೂ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಸದ್ಯದಲ್ಲೇ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್