ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು?

Public TV
1 Min Read

ಬಾಹುಬಲಿ ಭಾಗ 1 ಮತ್ತು 2 ಸಿನಿಮಾ ಇಡೀ ಸಿನಿಕ್ಷೇತ್ರವೇ ಭಾರತ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಫೇಮ್‍ನಿಂದ ಪ್ರಭಾಸ್ ಅವರನ್ನು ಬೇರೆ ಪಾತ್ರದಲ್ಲಿ ಪ್ರೇಕ್ಷಕರು ಒಪ್ಪಿಕೊಂಡಿಲ್ಲ. ಈ ವೇಳೆ ಪ್ರಭಾಸ್ ಅವರಿಗೆ ಬಾಹುಬಲಿ ಭಾಗ 3 ಮಾಡುವ ಯೋಜನೆ ಇದ್ಯ ಎಂದು ಕೇಳಿದ್ದಕ್ಕೆ, ಎಸ್‍ಎಸ್ ರಾಜಮೌಳಿ ಬಯಸಿದರೆ ಮಾತ್ರ ಬಾಹುಬಲಿ 3 ಸಾಧ್ಯವಾಗುತ್ತೆ ಎಂದು ನಕ್ಕಿದರು.

‘ರಾಧೆ ಶ್ಯಾಮ್’ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಪ್ರಭಾಸ್‍ಗೆ ಬಾಹುಬಲಿ 3 ಬರುತ್ತ ಎಂಬ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಗುತ್ತ ಉತ್ತರ ಕೊಟ್ಟ ಅವರು, ಬಾಹುಬಲಿ 3 ಆಗಬೇಕಾದರೆ, ಅದು ಖಂಡಿತವಾಗಿಯೂ ಸಮಯ ತೆಗೆದುಕೊಳ್ಳುತ್ತದೆ. ಅದು ಎಸ್‍ಎಸ್ ರಾಜಮೌಳಿ ಕೈಯಲ್ಲಿದೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಮಾಡಬೇಕಾದ ಸಿನಿಮಾ ಈಗ ವಿರಾಟ್ ಪಾಲು! – ಕೊನೆಗೂ ಈಡೇರಲಿಲ್ಲ ದಿನಕರ್ ಕನಸು!

ಬಾಹುಬಲಿ ನನ್ನ ಹೃದಯಕ್ಕೆ ಬಹಳ ಹತ್ತಿರವಿರುವ ಚಿತ್ರ. ನನ್ನ ವೃತ್ತಿಜೀವನದಲ್ಲಿ ಆ ಸಿನಿಮಾ ಬೀರಿದ ಪ್ರಭಾವವನ್ನು ಎಂದಿಗೂ ಬೇರೆ ಜೊತೆ ಹೊಂದಿಸಲು ಸಾಧ್ಯವಿಲ್ಲ. ಬಾಹುಬಲಿ 3 ಬರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಅದನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ. ಅದು ರಾಜಮೌಳಿ ಬಯಸಿದರೆ ಮಾತ್ರ ಆಗುತ್ತೆ ಎಂದು ಉತ್ತರಿಸಿದರು.

ಬಾಹುಬಲಿ ಸಿನಿಮಾವನ್ನು ಬಿಟ್ಟು ಪ್ರಭಾಸ್ ಯಾವುದೇ ಪಾತ್ರ ಮಾಡಿದರೂ ಅದನ್ನು ಮೀರಿಸುವಂತಹ ಪಾತ್ರ ಅವರಿಗೆ ಸಿಗುತ್ತಿಲ್ಲ. ಅದಕ್ಕೆ ಅಭಿಮಾನಿಗಳು ಮತ್ತೆ ರಾಜಮೌಳಿ ಮತ್ತು ಪ್ರಭಾಸ್ ಒಟ್ಟಿಗೆ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದಾರೆ. ಬಾಹುಬಲಿಯಲ್ಲಿ ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿತ್ತು.

ತಮ್ಮ ವೃತ್ತಿಜೀವನದಲ್ಲಿ ಇಬ್ಬರು ಫುಲ್ ಬ್ಯುಸಿಯಾಗಿದ್ದಾರೆ. ಪ್ರಭಾಸ್ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಇದ್ರೆ, ರಾಜಮೌಳಿ ಅವರು ತಮ್ಮ ‘RRR’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

Share This Article
Leave a Comment

Leave a Reply

Your email address will not be published. Required fields are marked *