ಬಾಗಲಕೋಟೆ: ಬೆಳಗಾವಿ ರಾಜಕಾರಣ ಅಷ್ಟು ಸರಳವಿಲ್ಲ. ಇಲ್ಲಿನ ರಾಜಕಾರಣಕ್ಕೆ ಸರ್ಕಾರ ಬೀಳಿಸುವುದು ಗೊತ್ತು, ಉಳಿಸುವುದು ಗೊತ್ತು ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಏಕವಚನದಲ್ಲಿ ಟಾಂಗ್ ನೀಡಿದರು. ಲಕ್ಷ್ಮಿ ಹೆಬ್ಬಾಳಕರ್ ಜೋರ್ ಅದಾಳ ಎಂದು ವ್ಯಂಗ್ಯವಾಡಿದ ಕೋರೆ, ಜಾರಕಿಹೊಳಿ ಬ್ರದರ್ಸ್ ಕೂಡ ಜೋರು ಇದ್ದಾರೆ. ಏನಾಗುತ್ತದೆ ಎಂದು ಮುಂದೆ ಕಾದು ನೋಡೋಣ ಎಂದರು.
ಇದೇ ವೇಳೆ ಬಿಜೆಪಿ ಪಕ್ಷದಿಂದ ರಾಜ್ಯ ಸಮ್ಮಿಶ್ರ ಸರ್ಕಾರವನ್ನ ಬೀಳಿಸುವ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಭಾಕರ ಕೋರೆ, ಸರ್ಕಾರ ತನ್ನಿಂದ ತಾನೇ ಬೀಳಲಿದೆ ಎಂದರು. ಇದೇ ವೇಳೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗ ಅಮಿತ್ ಕೋರೆಯನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುವ ಮನಸ್ಸಿದೆ. ಆದು ಸಾಧ್ಯವಾಗದಿದ್ದರೆ ತಾನು ಟಿಕೆಟ್ ಆಕಾಂಕ್ಷಿಯಾಗಿದ್ದು, ಆದರೆ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಹಿಂದೆಯೂ ಸಮ್ಮಿಶ್ರ ಡೆಡ್ ಲೈನ್ ನೀಡಿ ಭವಿಷ್ಯವಾಣಿ ನುಡಿದಿದ್ದ ಪ್ರಭಾಕರ ಕೋರೆ ದೀಪಾವಳಿಗೆ ಮೊದಲೇ ದೋಸ್ತಿ ಸರ್ಕಾರ ಉರುಳೋದು ಸತ್ಯ ತಿಳಿಸಿದ್ದರು. ಅಲ್ಲದೇ ದೋಸ್ತಿ ಸರ್ಕಾರದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv