ಬೆಂಗಳೂರು : ಎಲೆಕ್ಟ್ರಾನಿಕ್ ಮೀಡಿಯಾದ ರಾಜಕೀಯ ವರದಿಗಾರರು, ಛಾಯಾಗ್ರಾಹಕರು ಸೇರಿ ನಡೆಸಿದ ಪಿಪಿಎಲ್(ಪೊಲಿಟಿಕಲ್ ಪ್ರೀಮಿಯರ್ ಲೀಗ್) ಸೀಸನ್ 2 ಸಿಎಂ ಕ್ರಿಕೆಟ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನ.ವಿನಯ್ ನೇತೃತ್ವದ ಸ್ಟಾರ್ ಸುನಾಮಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಗುರುಲಿಂಗಸ್ವಾಮಿ ನೇತೃತ್ವದ ಶಾರ್ಪ್ ಶೂಟರ್ ತಂಡ ರನ್ನರ್ ಅಪ್ ಆಗಿದೆ.
ವಿಜಯನಗರದ ಬಾಲಗಂಗಾಧರನಾಥ ಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಾರ್ಪ್ ಶೂಟರ್ಸ್ ತಂಡ 43 ರನ್ ಗಳಿಸಿತು. ಗೆಲ್ಲಲು 44 ರನ್ ಗುರಿ ಬೆನ್ನತ್ತಿದ ಸ್ಟಾರ್ ಸುನಾಮಿ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ಬೆನ್ನತ್ತಿ ಚಾಂಪಿಯನ್ ಆಯ್ತು.
ರಾಜಕೀಯ ವರದಿಗಾರರು, ಛಾಯಾಗ್ರಹಕರು ಒಳಗೂಡಿ 5 ತಂಡ ರಚನೆ ಮಾಡಿಕೊಂಡು ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಪಂದ್ಯಾವಳಿಗಳನ್ನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ, ಸಚಿವ ಸೋಮಣ್ಣ ಉದ್ಘಾಟನೆ ಮಾಡಿದ್ರು. ಮೀಡಿಯಾ ಕಿಂಗ್, ಶಾರ್ಪ್ ಶೂಟರ್ಸ್, ಸನ್ ರೈಸರ್ಸ್, ಮಾಸ್ಟರ್ ಬ್ಲಾಸ್ಟರ್, ಸ್ಟಾರ್ ಸುನಾಮಿ ತಂಡಗಳು ರಚನೆ ಮಾಡಿ ಪಂದ್ಯ ಆಯೋಜನೆ ಮಾಡಲಾಗಿತ್ತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ರವೀಶ್ ನೇತೃತ್ವದ ಸನ್ ರೈಸರ್ ತಂಡ ಗೆಲುವು ಸಾಧಿಸಿತು.