ಶೀಘ್ರವೇ ನಿಮ್ಮ ಕೈ ಸೇರಲಿದೆ ‘ತೂಗದೀಪ ದರ್ಶನ’ – ಮುಖಪುಟ ಬಿಡುಗಡೆಗೊಳಿಸಿದ ಪುನೀತ್

Public TV
2 Min Read

ಬೆಂಗಳೂರು: ಕಷ್ಟದಿಂದ ಮೇಲೆ ಬಂದು ಸ್ಯಾಂಡಲ್‍ವುಡ್ ‘ಸಾರಥಿ’ ಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಪುಸ್ತಕವೊಂದು ಶೀಘ್ರವೇ ಬಿಡುಗಡೆಯಾಗಲಿದೆ.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಹಲವು ಮಂದಿಗೆ ಸಹಾಯ ಮಾಡಿದ್ದಾರೆ. ಆದರೆ ಎಲ್ಲಿಯೂ ದರ್ಶನ್ ತಮ್ಮ ಬಗ್ಗೆ ಹೇಳಿಕೊಳ್ಳುವುದಿಲ್ಲ. ಹೀಗಾಗಿ ದರ್ಶನ್ ಬಗ್ಗೆ ಗೊತ್ತಿಲ್ಲದ ವಿಚಾರಗಳನ್ನು ತಿಳಿಸಲು ಪತ್ರಕರ್ತ ವಿನಾಯಕರಾಮ್ ಕಲಗಾರು ‘ತೂಗುದೀಪ ದರ್ಶನ’ ಪುಸ್ತಕವನ್ನು ಬರೆಯುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ‘ತೂಗದೀಪ ದರ್ಶನ’ ಪುಸ್ತಕದ ಮುಖಪುಟ ಬಿಡುಗಡೆ ಮಾಡಿದ್ದಾರೆ. ದರ್ಶನ್ ಜೊತೆಗೆ ತಂದೆ ತೂಗುದೀಪ ಶ್ರೀನಿವಾಸ್, ತಾಯಿ ಮೀನಾ, ಸಹೋದರ ದಿನಕರ್ ಅವರ ಫೋಟೋಗಳಿರುವ ಈ ಮುಖಪುಟ ಆಕರ್ಷಕವಾಗಿದೆ.

ಮುಖಪುಟವನ್ನು ಬಿಡುಗಡೆ ಮಾಡುವ ವೇಳೆ ಪುನೀತ್ ಅವರು ತೂಗುದೀಪ ಶ್ರೀನಿವಾಸ್ ಅವರ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ತೂಗುದೀಪ ಅವರ ಕುಟುಂಬ ಜೊತೆ ಒಳ್ಳೆಯ ಬಾಂಧವ್ಯವಿದೆ. ನಾನು ಚಿಕ್ಕ ವಯಸ್ಸಿನಲ್ಲಿ ಮಾಡಿದ ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹ್ಲಾದ’ ಹಾಗೂ ‘ಭಾಗ್ಯವಂತ’ ಚಿತ್ರಗಳು. ‘ಭಾಗ್ಯವಂತ’ ಚಿತ್ರದಲ್ಲಿ ಒಂದು ಚಿಕ್ಕ ದೃಶ್ಯದಲ್ಲಿ ತೂಗದೀಪ ಶ್ರೀನಿವಾಸ್ ಅವರು ರೈಲಿನಲ್ಲಿ ಬರುತ್ತಿರುತ್ತಾರೆ. ಆಗ ನಾನು ರೈಲನ್ನು ನಿಲ್ಲಿಸುತ್ತೇನೆ. ಆ ದೃಶ್ಯದ ಚಿತ್ರೀಕರಣ ಸಮಯದಲ್ಲಿ ತೂಗುದೀಪ ಶ್ರೀನಿವಾಸ್ ಅವರು ನನ್ನನ್ನು ಲೈಟ್ ಹತ್ತಿರ ಎತ್ತುಕೊಂಡು ನಿಲ್ಲುತ್ತಾರೆ. ಆ ಸಂದರ್ಭದಲ್ಲಿ ನಾನು ಪೈಜಾ ಹಾಕಿದ್ದೆ ಹಾಗೂ ಶರ್ಟ್ ಇರಲಿಲ್ಲ. ನನಗೆ ಚಳಿ ಆಗುತ್ತೆ ಎಂದು ಹಾಗೇ ಎತ್ತಿಕೊಂಡಿದ್ದರು. ಆ ಸಂದರ್ಭ ನನಗೆ ತುಂಬಾ ನೆನಪಿದೆ ಎಂದು ಪುನೀತ್ ತಮ್ಮ ಹಳೆಯ ನೆನಪನ್ನು ಹಂಚಿಕೊಂಡರು.

ದರ್ಶನ್ ತೂಗುದೀಪ ಅವರ ಚಾಲೆಂಜಿಂಗ್ ಬದುಕು, ಮಕ್ಕಳನ್ನು ಟಾಪ್ ಸ್ಥಾನಕ್ಕೆ ತಂದು ನಿಲ್ಲಿಸಲು ಮೀನಾ ತೂಗುದೀಪ ಅವರ ಶ್ರಮ-ಪರಿಶ್ರಮ, ತೂಗುದೀಪ ಶ್ರೀನಿವಾಸ್ ಅವರ ದಿವ್ಯ ಬದುಕಿನ ಅನಾವರಣ.. ಈ ಎಲ್ಲ ವಿಚಾರಗಳು ಪುಸ್ತಕದಲ್ಲಿ ಇರಲಿದೆ. 200 ಪುಟದ ಈ ಪುಸ್ತಕದಲ್ಲಿ ಮೀನಾ ತೂಗುದೀಪ ಅವರು ಯಾರಿಗೂ ಗೊತ್ತಿರದ ಒಂದಷ್ಟು ರೋಚಕ ವಿಷಯ ಇಲ್ಲಿ ಹೇಳಿದ್ದಾರೆ. ಅಪರೂಪದ ಫೋಟೋಸ್ ಜೊತೆ ಇದು ಹೊರಬರಲಿದ್ದು, ತೂಗುದೀಪ ಕುಟುಂಬದ ಸಮಗ್ರ ಚಿತ್ರಣ ಈ ಪುಸ್ತಕದಲ್ಲಿದೆ.

ಮಾರ್ಚ್ 4ರಿಂದ ‘ತೂಗುದೀಪ ದರ್ಶನ’ದ ಎಕ್ಸ್ ಕ್ಲೂಸಿವ್ ಪುಸ್ತಕದ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಪುಸ್ತಕ ಮೊದಲ ವರ್ಷನ್ ಆಗಿದ್ದು, ಶೀಘ್ರದಲ್ಲೇ ಮತ್ತೊಂದು ವರ್ಷನ್ ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *