ಬೆಂಗಳೂರಿನ ಹಲವೆಡೆ ಭಾನುವಾರ ವಿದ್ಯುತ್ ವ್ಯತ್ಯಯ – ಎಲ್ಲೆಲ್ಲಿ ಕರೆಂಟ್ ಕಟ್?

Public TV
1 Min Read

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರ (ಸೆ.14) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂ ಓದಿ: ಬೆಂಗಳೂರು | ನಗರದ ಹಲವೆಡೆ ಶನಿವಾರ ವಿದ್ಯುತ್ ವ್ಯತ್ಯಯ

ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4 ನೇ ಬ್ಲಾಕ್, 2 ನೇ ಬ್ಲಾಕ್, ಎಂಇಐ ಫ್ಯಾಕ್ಟರಿ, ರಾಜಗೋಪಾಲ ನಗರ, ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 10 ನೇ ಕ್ರಾಸ್, 1 ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, 3 ನೇ ಕ್ರಾಸ್, 4 ನೇ ಕ್ರಾಸ್, 1 ನೇ ಸ್ಟೇಟ್ಜ್ ಪೀಣ್ಯ ಕೈಗಾರಿಕಾ ಪ್ರದೇಶ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ಚೈರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಜನರಲ್ ಮೆಟಲ್ ರಸ್ತೆ, ಮೈಸೂರು ಎಂಜಿನಿಯರ್, ರಸ್ತೆ, ಸನ್ರೈಸ್ ಕಾಸ್ಟಿಂಗ್ ರಸ್ತೆ, 3 ನೇ ಹಂತ, ವೈಷ್ಣವಿ ಮಾಲ್, ಕಾವೇರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Share This Article