ಬೆಂಗಳೂರು| ಬೆಸ್ಕಾಂ ವ್ಯಾಪ್ತಿಯ ಕೆಲವೆಡೆ ಇಂದು ವಿದ್ಯುತ್ ವ್ಯತ್ಯಯ – ಎಲ್ಲೆಲ್ಲಿ?

Public TV
1 Min Read

ಬೆಂಗಳೂರು: ಕೆಪಿಟಿಸಿಎಲ್‌ನ (KPTCL) ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ ಕೆಲವೆಡೆ ಇಂದು (ಗುರುವಾರ) ವಿದ್ಯುತ್‌ ವ್ಯತ್ಯಯ (Power Outage) ಆಗಲಿದೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಕೆಪಿಟಿಸಿಎಲ್ ದುರಸ್ತಿ ಕಾರ್ಯ ನಡೆಯಲಿದೆ. ಹೀಗಾಗಿ ಕೆಲವೆಡೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆ

ಯಾವ್ಯಾವ ಸಬ್‌ಸ್ಟೇಷನ್ ವ್ಯಾಪ್ತಿಯಲ್ಲಿ ವ್ಯತ್ಯಯ?

ಬೆಂಗಳೂರು ನಗರ
* ಶಾಂತಿನಗರ ಬಿಎಂಟಿಸಿ
* ಬನ್ನೇರುಘಟ್ಟ
* ಪೋಯೆಟ್ರಿ ರೋಡ್
* ಸೇಂಟ್‌ ಜಾನ್ಸ್‌ವುಡ್

ಬೆಂಗಳೂರು ನಗರದ ಹೊರವಲಯ
* ದೊಡ್ಡಬಳ್ಳಾಪುರದ ಭಾಗಶಃ
* ಕುಂದಾಣ
* ದೇವನಹಳ್ಳಿ
* ಡಿ ಕ್ರಾಸ್- ಡಿಬಿ ಪುರ ಇದನ್ನೂ ಓದಿ: ಬಿಗ್‌ಬಾಸ್‌ ಸ್ಪರ್ಧಿಗೆ ಸಂಕಷ್ಟ – ಡ್ರೋನ್‌ ಪ್ರತಾಪ್‌ ವಿರುದ್ಧ 2.50 ಕೋಟಿ ರೂ. ಮಾನನಷ್ಟ ಕೇಸ್‌!

Share This Article