ಬೆಂಗಳೂರಿನ ಈ ಪ್ರದೇಶದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ?

1 Min Read

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಮಂಗಳವಾರ (ಸೆ.16) ಹಾಗೂ ಬುಧವಾರ (ಸೆ.17) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮಂಗಳವಾರ (ಸೆ.16) ಆಡುಗೋಡಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಮ್.ಎಪ್, ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರಿ, ಫೋರಾಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಯಾನ್ಸ್ ಅಡ್ಮಿನಿಸ್ರೆಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದಾವನ ಸ್ಲಮ್, ಲಾಲ್‌ಜಿ ನಗರ, ಶಾಮಣ್ಣ ಗಾರ್ಡನ್, ಎನ್‌ಡಿಆರ್‌ಐ, ಪೋಲಿಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಇದನ್ನೂ ಓದಿ: ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

ಇನ್ನೂ ಬುಧವಾರ (ಸೆ.17) 66/11 ಕೆವಿ ರಾಜನಕುಂಟೆ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:00ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ರ‍್ಲಾಪುರ, ಕೆಎಂಎಫ್, ಇಟಗಲ್ಪುರ, ರ‍್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ, ಸೆಂಚುರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

Share This Article