ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸೆ.26 (ಶುಕ್ರವಾರ) ಹಾಗೂ 27 (ಶನಿವಾರ) ರಂದು ವಿದ್ಯುತ್ ಪೂರೈಕೆಯಲ್ಲಿ (Current Supply) ವ್ಯತ್ಯಯ ಉಂಟಾಗಲಿದೆ.
ಇಸ್ಕಾನ್ ಉಪಕೇಂದ್ರ ಮತ್ತು ಆರ್.ಎಂ.ವಿ ಉಪಕೇಂದ್ರ ವ್ಯಾಪ್ತಿಯಲ್ಲಿ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (Bescom) ಪ್ರಕಟಣೆಯಲ್ಲಿ ತಿಳಿಸಿದೆ.
ಸೆ.26 ರಂದು ಎಲ್ಲೆಲ್ಲಿ ಕರೆಂಟ್ ಇರಲ್ಲ?
ಇಸ್ಕಾನ್ ಉಪಕೇಂದ್ರ ವ್ಯಾಪ್ತಿಯ ಮಂತ್ರಿ ಅಪಾರ್ಟ್ಮೆಂಟ್, ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ವಿ.ವಿ. ಲೇಔಟ್, ಬಾಲಾಜಿ ಲೇಔಟ್, ರಾಯಲ್ ಫಾರಂ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರುವುದಿಲ್ಲ.
ಸೆ.26 ರಂದು ಯಾವ ಪ್ರದೇಶದಲ್ಲಿ ವ್ಯತ್ಯಯ?
ಆರ್.ಎಂ.ವಿ ಉಪಕೇಂದ್ರ ವ್ಯಾಪ್ತಿಯ ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎಂಎಸ್‌ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್‌ಐ ಕ್ವಾರ್ಟ್ಸ್, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಬಿಇಎಲ್ ರಸ್ತೆ, ಎಂಎಸ್‌ಆರ್ ನಗರ, ಜಲದರ್ಶಿನಿ ಲೇಔಟ್, ಎಂಎಸ್‌ಆರ್ ನಗರ, ಪೈಪ್ ಲೈನ್ ರಸ್ತೆ, ರಾಮಯ್ಯ ಬಾಲಕರ ಹಾಸ್ಟೆಲ್, ಎ.ಕೆ. ಕಾಲೋನಿ, ಶ್ರೀನಿಕೇತ್ ಅಪಾರ್ಟ್ಮೆಂಟ್, ಕಾಫಿ ಡೇ, ಪಿಜ್ಜಾ ಹಟ್ ರಾಮಯ್ಯ ಆಸ್ಪತ್ರೆ ಎದುರು, ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಬಿಇಎಲ್ ರಸ್ತೆ, ಇಸ್ರೋ, ಡೋಲರ್ಸ್ ಕಾಲೋನಿ, ಬಿಇಎಲ್ ರಸ್ತೆ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ.