2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!

Public TV
2 Min Read

ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಬಳಿ 548,85,20,592  ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ ಕನಕಪುರ ತಾಲೂಕಿನ ಕಬ್ಬಾಳುವಿನಲ್ಲಿರುವ ಕಬ್ಬಾಳಮ್ಮ ದೇವಿಗೆ, ಕನಕಪುರದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದರು.

ದೇವಾಲಯದಿಂದ ಬೃಹತ್ ರ‍್ಯಾಲಿ ಮೂಲಕ ಸಾವಿರಾರು ಬೆಂಬಲಿಗರೊಡನೆ ತಾಲೂಕು ಕಚೇರಿಗೆ ಆಗಮಿಸಿದ ಸಚಿವರು ಚುನಾವಣಾಧಿಕಾರಿ ಉಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಉಷಾ, ತಾಯಿ ಗೌರಮ್ಮ, ತಮ್ಮ ಡಿ.ಕೆ.ಸುರೇಶ್ ಸಚಿವರ ಜೊತೆಗಿದ್ದರು.

ಡಿಕೆ ಶಿವಕುಮಾರ್  548 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ,  ಮಗಳು ಐಶ್ವರ್ಯ ಬಳಿ 102.88 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಪತ್ನಿ ಉಷಾ 86.95 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಡಿಕೆಶಿ ಕೈಯಲ್ಲಿ 6.49 ಲಕ್ಷ ರೂ. ಇದೆ. ಇದನ್ನೂ ಓದಿ: ಬಿಎಸ್‍ವೈ ಬಳಿಯಿದೆ 7.23 ಕೋಟಿ ರೂ. ಮೌಲ್ಯದ ಆಸ್ತಿ!

2 ಕೆಜಿ 184 ಗ್ರಾಂ ಚಿನ್ನ, 12 ಕೆಜಿ 600 ಗ್ರಾಂ ಬೆಳ್ಳಿ, 1 ಕೆಜಿ 66 ಗ್ರಾಂ ಚಿನ್ನ, 321 ಗ್ರಾಂ ವಜ್ರ, ಪತ್ನಿ ಉಷಾ ಬಳಿ 2 ಕೆಜಿ 600 ಗ್ರಾಂ ಚಿನ್ನ, ಮಗ ಆಕಾಶ್ ಕೆಂಪೇಗೌಡ ಬಳಿ 615 ಗ್ರಾಂ ಚಿನ್ನ, ಮಗಳು ಐಶ್ವರ್ಯ ಬಳಿ 950 ಗ್ರಾಂ ಚಿನ್ನ, ಮಗಳು ಆಭರಣ ಹೆಸರಲ್ಲಿ 675 ಗ್ರಾಂ ಚಿನ್ನವಿದೆ ಎಂದು ಡಿಕೆ ಶಿವಕುಮಾರ್ ಘೋಷಿಸಿಕೊಂಡಿದ್ದಾರೆ.

2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತನ್ನ ಬಳಿ 251 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇದಕ್ಕೂ ಮೊದಲು 2008ರಲ್ಲಿ ನಡೆದ ಚುನಾವಣೆ ವೇಳೆ ತನ್ನ ಬಳಿ 75 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದರು.

ಎರಡನೇ ಶ್ರೀಮಂತ ಸಚಿವ: 251 ಕೋಟಿ ರೂ. ಆಸ್ತಿಯನ್ನು ಹೊಂದುವ ಮೂಲಕ ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. 2016ರ ಆಗಸ್ಟ್ ನಲ್ಲಿ ಅಸೋಶಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 496 ಕೋಟಿ ರೂ. ಆಸ್ತಿಯನ್ನು ಹೊಂದಿರುವ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು ನಾರಾಯಣ ದೇಶದ ಅತ್ಯಂತ ಶ್ರೀಮಂತ ಸಚಿವರು ಎನಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಮೌಲ್ಯದ ಮಾಹಿತಿಯನ್ನು ಆಧರಿಸಿ, 29 ವಿಧಾನಸಭೆ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಸಚಿವರನ್ನು ಅಧ್ಯಯನ ನಡೆಸಿ ವರದಿ ತಯಾರಿಸಿತ್ತು.

ಡಿಕೆಶಿ ಬಳಿ ಯಾವ ವರ್ಷ ಎಷ್ಟು ಆಸ್ತಿ ಇತ್ತು?
2008 – 75,59,87,229 ರೂ.
2013 – 251,50,96,329 ರೂ.
2018 – 548,85,20,592

Share This Article
Leave a Comment

Leave a Reply

Your email address will not be published. Required fields are marked *