KRS ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ಮುಂದೂಡಿಕೆ

Public TV
1 Min Read

ಮಂಡ್ಯ: ಕೆಆರ್‌ಎಸ್‌ (KRS Dam) ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆಯನ್ನು ಮುಂದೂಡಲಾಗಿದೆ. ನಾಲಾ ಆಧುನೀಕರಣ ಕಾಮಗಾರಿಯಿಂದಾಗಿ ನೀರು ಬಿಡುಗಡೆ ವಿಳಂಬವಾಗಿದೆ.

ಬುಧವಾರದಿಂದ (ಜು.10) ನಾಲೆಗೆ ನೀರು ಹರಿಸುವ ಸಾಧ್ಯತೆ ಇದೆ. ನಿನ್ನೆ ಸಂಜೆಯಿಂದಲೇ ನೀರು ಬಿಡುಗಡೆ ಮಾಡವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ನೀರು ಬಿಡುಗಡೆಗೆ ತೀರ್ಮಾನಿಸಲಾಗಿತ್ತು. ಇದನ್ನೂ ಓದಿ: Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?

ಜು.8ರಿಂದ 15 ದಿನ ನೀರು ಬಿಡುಗಡೆ ಮಾಡುವುದಾಗಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದರು. ಆದರೆ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಗೆಯಿಂದ ನೀರು ಬಿಡುಗಡೆ ತಡವಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನಾಲೆಯಲ್ಲೇ ಯಂತ್ರೋಪಕರಣಗಳು ಇವೆ. ನಾಲೆಯಿಂದ ಯಂತ್ರೋಪಕರಣ ತೆರವುಗೊಳಿಸಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾರಂಗಿ ಜಲಾಶಯದಿಂದ ನದಿಗೆ 1 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 103.40 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 25.594 ಟಿಎಂಸಿ
ಒಳ ಹರಿವು – 6,600 ಕ್ಯೂಸೆಕ್
ಹೊರ ಹರಿವು – 575 ಕ್ಯೂಸೆಕ್

Share This Article