ಗುಡ್ ಫ್ರೈಡೆ ದಿನ ನಿಗಿದಿಯಾಗಿರೋ ಸಿಇಟಿ ಪರೀಕ್ಷೆ ಮುಂದೂಡಿ: ಐವಾನ್ ಡಿಸೋಜಾ

By
1 Min Read

ಬೆಂಗಳೂರು: ಗುಡ್ ಫ್ರೈಡೆ (Good Friday) ದಿನ ನಿಗದಿಯಾಗಿರುವ ಸಿಇಟಿ ಪರೀಕ್ಷೆಯನ್ನ (CET Exam) ಮುಂದೂಡುವಂತೆ ಕಾಂಗ್ರೆಸ್ ‌ಸದಸ್ಯ ಐವಾನ್ ಡಿಸೋಜಾ (Ivan D’Souza) ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಅವರು, ಏಪ್ರಿಲ್ 16,17,18 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದೆ. ಏ.18 ಗುಡ್ ಫ್ರೈಡೆ ಕ್ರೈಸ್ತರ ಪವಿತ್ರ ದಿನ. ಗುಡ್ ಫ್ರೈಡೆ ಸರ್ಕಾರಿ ರಜೆ ಇದ್ದರೂ, ಸಿಇಟಿ ಪರೀಕ್ಷೆ ನಿಗದಿ ಮಾಡಲಾಗಿದೆ. ಅನೇಕ ಕ್ರೈಸ್ತ ಸಂಘಗಳು, ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಕ್ರೈಸ್ತ ವಿದ್ಯಾರ್ಥಿಗಳು ಎಕ್ಸಾಂ ಬರೆಯಲು ಅರ್ಜಿ ಹಾಕಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಏ.18 ರಂದು ನಿಗದಿಯಾಗಿರೋ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರಕ್ಕೆ ಉನ್ನತ ಶಿಕ್ಷಣ ‌ಸಚಿವರಿಂದ ಉತ್ತರ ಕೊಡಿಸುವುದಾಗಿ ಸರ್ಕಾರದ ಪರವಾಗಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

Share This Article