ಮೋದಿ, RSS ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಅರೆಸ್ಟ್

Public TV
1 Min Read

ತುಮಕೂರು: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ನಗರದ ನಿವಾಸಿ ಅಮ್ಜದ್ ಖಾನ್ ಬಂಧಿತ ಆರೋಪಿ. ಈತ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಡಿವೈಎಸ್‍ಪಿ ಕಲ್ಯಾಣ್ ಕುಮಾರ್ ನೇತೃತ್ವದ ತಂಡ ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ. ಈ ಕುರಿತು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ತಿಪಟೂರು ಡಿವೈಎಸ್‍ಪಿ ಕಲ್ಯಾಣ್ ಕುಮಾರ್ ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮುಸಲ್ಮಾನರ ತಂಟೆಗೆ ಬಂದರೆ ಹಿಂದೂಗಳನ್ನು ಉಳಿಸುವುದಿಲ್ಲ. ಧೈರ್ಯ, ತಾಕತ್ತಿದ್ದರೆ ನೇರವಾಗಿ ಬನ್ನಿ. ಮುಸಲ್ಮಾನರನ್ನು ಏನೆಂದು ತಿಳಿದಿದ್ದೀರಾ. ನಾವು ಏನು ಬೇಕಾದರೂ ಮಾಡಲು ಸಿದ್ಧ. ನಿಮ್ಮ ನರೇಂದ್ರ ಮೋದಿ ಆಗಲಿ ಅಥವಾ ಆರ್‌ಎಸ್‌ಎಸ್ ಆಗಲಿ ಏನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಮುಸಲ್ಮಾನರ ಪಕ್ಷ ಕಟ್ಟುತ್ತೇವೆ. ಆಗ ಏನು ಮಾಡುತ್ತಿರಾ. ಈ ವಿಡಿಯೊವನ್ನು ಆರ್‌ಎಸ್‌ಎಸ್, ಹಿಂದೂ ಸಭಾದವರಿಗೆ ತಲುಪುವವರೆಗೂ ಹಂಚಿ ಪ್ರಚೋದನಕಾರಿ ಮಾತುಗಳು ವಿಡಿಯೋದಲ್ಲಿವೆ.

Share This Article
Leave a Comment

Leave a Reply

Your email address will not be published. Required fields are marked *