ಪೋರ್ಚುಗಲ್‌ ಪ್ರಧಾನಿ ಸ್ಥಾನಕ್ಕೆ ಆಂಟೋನಿಯೊ ಕೋಸ್ಟಾ ರಾಜೀನಾಮೆ

Public TV
1 Min Read

ಲಿಸ್ಬನ್: ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಮಂಗಳವಾರ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾರೆ. ಕೋಸ್ಟಾ ಅವರು 2015 ರಿಂದ ಅಧಿಕಾರದಲ್ಲಿದ್ದರು.

ಭ್ರಷ್ಟಾಚಾರ ಮತ್ತು ಪ್ರಭಾವದ ದಂಧೆಯ ವಿಚಾರಣೆಯ ಭಾಗವಾಗಿ ಪೊಲೀಸರು, ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಿ ಕೋಸ್ಟಾ ಅವರ ಮುಖ್ಯ ಸಿಬ್ಬಂದಿಗೆ ಬಂಧನ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಪ್ರಧಾನಿ ರಾಜೀನಾಮೆ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್‌ ಕುಮಾರ್‌ ಅಸಭ್ಯ ನಾಯಕ ಎಂದ BJP

ಕೋಸ್ಟಾ ಅವರ ಮುಖ್ಯ ಸಿಬ್ಬಂದಿಯ ಕಚೇರಿ, ಪರಿಸರ ಸಚಿವಾಲಯ, ಮೂಲಸೌಕರ್ಯ ಸಚಿವಾಲಯ, ಸೈನ್ಸ್ ಪಟ್ಟಣದಲ್ಲಿರುವ ಸಿಟಿ ಕೌನ್ಸಿಲ್ ಕಚೇರಿ ಮತ್ತು ಹಲವಾರು ಖಾಸಗಿ ಮನೆಗಳನ್ನು ಒಳಗೊಂಡಂತೆ 37 ಸ್ಥಳಗಳಲ್ಲಿ ಪರಿಶೀಲನೆ ನಡೆಸಲು ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದಾರೆ.

ಕೋಸ್ಟಾ ಅವರನ್ನು ಹೆಸರಿಸದಿದ್ದರೂ, ಪ್ರಧಾನ ಮಂತ್ರಿ ಕಚೇರಿಯ ಮುಖ್ಯಸ್ಥರಿಗೆ ಬಂಧನ ವಾರೆಂಟ್‌ ಹೊರಡಿಸಲಾಗಿದೆ. ಪೋರ್ಚುಗಲ್‌ನ ಮೂಲಸೌಕರ್ಯ ಸಚಿವರು ಮತ್ತು ಪೋರ್ಚುಗಲ್‌ನ ಪರಿಸರ ಸಂಸ್ಥೆಯ ಮುಖ್ಯಸ್ಥರ ಹೆಸರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಶಂಕಿತರೆಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

Share This Article