ಪೂಜಾ ಗಾಂಧಿ ಮದುವೆಗೆ ಕೌಂಟ್‌ಡೌನ್-‌ ಮಳೆ ಹುಡುಗಿ ಫುಲ್‌ ಮಿಂಚಿಂಗ್

Public TV
1 Min Read

ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ (Pooja Gandhi) ಹಸೆಮಣೆ ಏರಲು ಇದೀಗ ಕೌಂಟ್‌ಡೌನ್ ಶುರುವಾಗಿದೆ. ಬಹುಕಾಲದ ಗೆಳೆಯನ ಜೊತೆ ಹೊಸ ಬಾಳಿಗೆ ಮುನ್ನುಡಿ ಬರೆಯಲು ನಟಿ ಸಜ್ಜಾಗಿದ್ದಾರೆ. ಮಂತ್ರ ಮಾಂಗಲ್ಯ ಪದ್ಧತಿಯಂತೆ ನಟಿ ಮದುವೆಯಾಗುತ್ತಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ (Wedding) ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

ಪೂಜಾ- ವಿಜಯ್ ಮದುವೆಗೆ ಕುಟುಂಬಸ್ಥರು, ಆಪ್ತರು ಸ್ಯಾಂಡಲ್ವುಡ್‌ನ ಆತ್ಮೀಯ ಸ್ನೇಹಿತರು ಅಷ್ಟೇ ಭಾಗಿದ್ದಾರೆ. ಮುಂಗಾರು ಮಳೆ ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ, ಶುಭಾ ಪೂಂಜಾ, ಸುಮನಾ ಕಿತ್ತೂರು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ತಮ್ಮ ಮದುವೆ ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆ ನಡೆಯುತ್ತಿದ್ದು, ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಮಳೆ ಹುಡುಗಿಯ ಮದುವೆ ಗುಡ್ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article