‘ಕವಿಶೈಲ’ದಲ್ಲಿ ಪೂಜಾ ಗಾಂಧಿ ದಂಪತಿ

Public TV
1 Min Read

ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ಪೂಜಾ ಗಾಂಧಿ (Pooja Gandhi) ದಂಪತಿ ಕವಿಶೈಲಕ್ಕೆ  (Kavi Shaila)ಭೇಟಿ ನೀಡಿದ್ದಾರೆ. ಕುಪ್ಪಳ್ಳಿಯ ಕವಿ ಶೈಲಕ್ಕೆ ಪತಿಯೊಂದಿಗೆ ಆಗಮಿಸಿದ್ದ ಪೂಜಾ ಗಾಂಧಿ ಕೆಲ ಸಮಯವನ್ನು ಅಲ್ಲೆ ಕಳೆದಿದ್ದಾರೆ. ಕುವೆಂಪು ಅವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ  ಮಾಡಿಕೊಂಡಿದ್ದರ ಬೆನ್ನಲ್ಲೇ ದಂಪತಿ ಭೇಟಿ ನೀಡಿದ್ದು ವಿಶೇಷ.

ಇತ್ತೀಚೆಗಷ್ಟೇ ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಮತ್ತು  ಉದ್ಯಮಿ ವಿಜಯ್ ಘೋರ್ಪಡೆ (Vijay Ghorpade) ಬದುಕಿಗೆ ಕಾಲಿಟ್ಟಿದ್ದರು. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರಾಗಿದ್ದು, ಪೂಜಾ ಅವರ ಕನ್ನಡ ಪ್ರೇಮವೇ ಇಬ್ಬರೂ ಮದುವೆ ಆಗುವಂತೆ ಮಾಡಿತ್ತು.

 

ಪೂಜಾ- ವಿಜಯ್ ಮದುವೆಗೆ ಕುಟುಂಬಸ್ಥರು, ಆಪ್ತರು ಸ್ಯಾಂಡಲ್ವುಡ್‌ನ ಆತ್ಮೀಯ ಸ್ನೇಹಿತರು ಹಾಗೂ ಮುಂಗಾರು ಮಳೆ ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ, ಶುಭಾ ಪೂಂಜಾ, ಸುಮನಾ ಕಿತ್ತೂರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Share This Article