ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು – ಸಚಿವ ಪ್ರಿಯಾಂಕ್ ಖರ್ಗೆ

Public TV
1 Min Read

ಕಲಬುರಗಿ: ಬಿಜೆಪಿಯವರು (BJP) ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು.  ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲನೆ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಣೆಕಟ್ಟು ಬಹಳ ಹಳೆಯದಾಗಿ ಕ್ರಸ್ಟ್ ಗೇಟ್ ಕಳಚಿರಬಹುದು, ಬಿಜೆಪಿಯವರು ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲನೆ ಮಾಡಿದ್ದಾರೆ? ಅದರ ವರದಿಯ ದಾಖಲೆ ಕೊಡಲಿ. ಅವರ ವರದಿಯನ್ನು ನಾವು ನಿರ್ಲಕ್ಷ್ಯ ಮಾಡಿದ್ದರೆ ಆರೋಪ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ನವಲಿ ಸಮಾನಾಂತರ ಜಲಾಯಶಕ್ಕೆ ಇನ್ನು ಮುಂದೆ ಗಮನ ಹರಿಸುತ್ತೇವೆ. ಅದರ ಬಗ್ಗೆ ನಮ್ಮ ಸರ್ಕಾರ ಯೋಚನೆ ಮಾಡುತ್ತದೆ. ರಾಜ್ಯದ ಎಲ್ಲಾ ಡ್ಯಾಂಗಳ ಸ್ಟ್ರೆಂತ್ ಬಗ್ಗೆ ಪರೀಶಿಲನೆ ಮಾಡುತ್ತೇವೆ. ಮುಡಾ ಕೇಸ್ ನಲ್ಲಿ ಸ್ಪಷ್ಟವಾಗಿ ರಾಜಕೀಯ ದುರುದ್ದೇಶವಿದೆ. ರಾಜ್ಯಪಾಲರ ಕಚೇರಿಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೇರಿ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ಕಡೆ ದುರುಪಯೋಗ ಮಾಡಿದ್ದಾರೆ. ನಾವು ಸ್ಪಷ್ಟನೆ ನೀಡಿದರೂ 24 ಗಂಟೆಯೊಳಗೆ ಯಾರೋ ದೂರು ಕೊಟ್ಟಿದ್ದಾರೆ ಎಂದು ನೋಟಿಸ್ ನೀಡಿದ್ದಾರೆ ಎಂದು ಖರ್ಗೆ ಹೇಳಿಕೆ ನೀಡಿದ್ದಾರೆ.

ಇನ್ನೂ ಮುಡಾ ಹಗರಣ (Muda Case) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಡಾ ಕೇಸ್ ಪಿಸಿ ಆಕ್ಟ್‌ನಲ್ಲಿಯೇ ಬರುವುದಿಲ್ಲ, ಆದರೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿದ್ದಾರೆ ಎಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿ V/s ಬಿಜೆಪಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ ನಾಯಕತ್ವ ಒಪ್ಪುತ್ತಿಲ್ಲ. ಬಿಜೆಪಿಯವರೇ ಅವರ ನಾಯಕತ್ವ ಒಪ್ಪುತ್ತಿಲ್ಲ. ಬಿಜೆಪಿಯವರು ʻದೆಹಲಿ ಚಲೋʼ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಕುಟುಕಿದ್ದಾರೆ.

ಜುಲೈ 27 ರಂದು ಪಿಎಸ್‌ಐ ಪರಶುರಾಮ ನನನ್ನ್ನು ಭೇಟಿಯಾಗಿದ್ದು ನಿಜ. ಯಾದಗಿರಿ ಆಗುವುದಿಲ್ಲವೆಂದರೆ ನಮ್ಮಲ್ಲಿ ಬನ್ನಿ ಎಂದಿದ್ದರು. ನಾನು ಆ ಶಾಸಕರಿಗೆ ಮನವಿ ಮಾಡಿದ್ದೆ. ಆದರೆ ನಾವು ಬೇರೆಯವರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಪಿಎಸ್‌ಐ ಸಾವಿನ ಬಗ್ಗೆ ನಿಷ್ಪಕ್ಷಪಾತ ತನೀಖೆ ಮಾಡುತ್ತಿದ್ದೆವೆ ಎಂದರು.

Share This Article