ನಿಖಿಲ್‌ಗೆ ಬದುಕಲು ಹಲವು ಮಾರ್ಗಗಳಿವೆ; ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ: ಹೆಚ್‌ಡಿಕೆ

Public TV
1 Min Read

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧೆ ವಿಚಾರ ಕುರಿತು ರಾಮನಗರದಲ್ಲಿ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ (H.D. Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಬದುಕಲು ಹಲವು ಮಾರ್ಗಗಳಿವೆ. ಭಗವಂತ ಅವರಿಗೇ ಆದ ಒಂದು ಕಲೆ ಕೊಟ್ಟಿದ್ದಾನೆ. ಅವರು ರಾಜಕೀಯದಿಂದಲೇ ಬದುಕಬೇಕಾ? ಅವರಿಗೆ ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ, ಮಹದಾಯಿ ವಿಚಾರವಾಗಿ ಆಗಸ್ಟ್ 23ರಂದು ಸರ್ವಪಕ್ಷ ಸಭೆ: ಡಿಕೆಶಿ

ಈಗ ರಾಜಕೀಯಕ್ಕೆ ಲೂಟಿ ಹೊಡೆಯಲು ಬರುವವರೇ ಹೆಚ್ಚು. ಅಂತಹವರಿಗೆ ಜನರು ಮಣೆ ಹಾಕುತ್ತಿದ್ದಾರೆ. ನಿಖಿಲ್‌ಗೆ ರಾಜಕೀಯ ಬೇಡ ಅಂತ ಹಲವು ಬಾರಿ ಹೇಳಿದ್ದೇನೆ. ನಿಖಿಲ್ ನೆಮ್ಮದಿಯಿಂದ ಜೀವನ ಮಾಡಲಿ, ಕಷ್ಟಪಟ್ಟು ಬದುಕಲಿ. ಲೋಕಸಭಾ ಚುನಾವಣೆಗೆ ನಮ್ಮ ಕುಟುಂಬದಿಂದ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಹೇಳಿದ್ದಾರೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹಂಚಿದ್ದ ಗಿಫ್ಟ್ ಕಾರ್ಡ್ ವಿರುದ್ಧ ಕಾನೂನು ಹೋರಾಟ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಕಾನೂನು ಇದ್ಯಾ? ದುಡ್ಡಿದ್ದವನಿಗೆ ಮಾತ್ರ ಕಾನೂನು. ಬಡವರಿಗೆ ಕಾನೂನು ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಿಖಿಲ್ ಕುಮಾರ್ ಹೊಸ ಚಿತ್ರಕ್ಕೆ ಆ.23ರಂದು ಮುಹೂರ್ತ

ಸರ್ಕಾರ ಬಡವರಿಗೆ ನೋಟಿಫೈ ಮಾಡಿರುವ ಭೂಮಿಯನ್ನ ಯಾರಾದರೂ ಖರೀದಿ ಮಾಡಲು ಸಾಧ್ಯವೇ? ಅದನ್ನ ಎಂಪಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅಂತಹವರಿಗೆ ಈ ದೇಶದ ಕಾನೂನು ಇರೋದು. ಅವರಿಗೆ ರಕ್ಷಣೆ ಕೊಡುವುದಕ್ಕೆ ಕಾನೂನು ಇದೆ ಎಂದು ತಿಳಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್