ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ: ಕೆ.ಎಸ್ ಈಶ್ವರಪ್ಪ

Public TV
1 Min Read

ವಿಜಯಪುರ: ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಅಸಮಾಧಾನ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ (Vijayapura) ಮಾಧ್ಯಮಗಳೊಂದಿಗೆ ಮಾತನಾಡಿ, ಆ ಪಕ್ಷ ಈ ಪಕ್ಷ ಅಲ್ಲ, ಎಲ್ಲ ಪಕ್ಷಗಳು ಇದೆ ರೀತಿ ಆಗಿದೆ. ಎಲ್ಲ ಕಡೆ ಗುಂಪುಗಾರಿಕೆ ನಡೆದಿದೆ. ಹೈಕಮಾಂಡ್ ಏನು ಮಾಡುತ್ತಿದೆ ಗೊತ್ತಿಲ್ಲ. ಬಿಜೆಪಿ ಏನು ಮಾಡುತ್ತಿದೆ. ಹಿಂದುತ್ವದ ಅಡಿಯಲ್ಲಿ ಸಾಗಿತ್ತು. ಆದರೆ ಈಗ ಎಲ್ಲ ಜಾತಿ ಮೇಲೆ ನಡೆದಿದೆ. ಬಿಜೆಪಿ ಕಟ್ಟಿದ ಹಿರಿಯ ನಾಯಕರು ಈಗ ಸೈಡ್ ಲೈನ್ ಆಗಿದ್ದಾರೆ ಎಂದು ದೂರಿದರು.ಇದನ್ನೂ ಓದಿ: ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ವಂಚನೆ – 57 ಕೇಸ್‌ನಲ್ಲಿ ಬೇಕಾಗಿದ್ದ ಆರೋಪಿ ಅಂದರ್

ಕಾಂಗ್ರೆಸ್‌ನಲ್ಲಿ ಕೂಡ ಗುಂಪುಗಾರಿಕೆ ಇದೆ. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದೆಡೆ ಡಿಕೆಶಿಯವರ ಗುಂಪುಗಳಿವೆ. ಡಿಕೆಶಿಗೆ ಪಕ್ಷದಲ್ಲಿ ಯಾವುದೆ ಬೆಲೆ ಇಲ್ಲ ಎಂದರು.

ಗಂಗೆಯಲ್ಲಿ ಮುಳುಗುವುದರಿಂದ ಬಡತನ ಹೋಗುವುದಿಲ್ಲ ಎಂಬ ಮಲ್ಲಿಕಾರ್ಜುನ ಹೇಳಿಕೆಗೆ ಪ್ರತಿಕ್ರಿಯಿಸಿ, 144 ವರ್ಷದ ನಂತರ ಮಹಾ ಕುಂಭಮೇಳದಲ್ಲಿ ನಡೆದಿದೆ. ಖರ್ಗೆಯವರೇ ಯಾಕೆ ಹಿಂದುಗಳ ಮನಸ್ಸು ನೋಯಿಸುತ್ತೀರಿ. ಹಿಂದು ಸಮಾಜವನ್ನು ಕೆಣಕಬೇಡಿ. ಕಾಂಗ್ರೆಸ್‌ನಿಂದ ಯಾರೆಲ್ಲ ಕುಂಭಮೇಳಕ್ಕೆ ಹೋಗಿದ್ದಾರೆ ಅವರನ್ನು ಕಿತ್ತು ಹಾಕಿ. ಖರ್ಗೆಯವರೇ ಬಾಯಿ ಮುಚ್ಕೊಂಡು ಇರಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಕೇಂದ್ರದಿಂದ ಬೋಗಸ್ ಬಜೆಟ್, ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ: ಡಿಕೆ ಸುರೇಶ್

 

Share This Article