ಗೆಳೆಯರ ಮಧ್ಯೆ ಚಪ್ಪಲಿ ಹೊಡೆದಾಟಕ್ಕೆ ಕಾರಣಯ್ತು ರಾಜಕೀಯ ಚರ್ಚೆ

Public TV
1 Min Read

ಧಾರವಾಡ: ರಾಜಕೀಯ ಚರ್ಚೆಯಿಂದಾಗಿ ಗೆಳೆಯರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದಿದೆ.

ಅಣ್ಣಿಗೇರಿಯ ನಿವಾಸಿಗಳಾದ ನಾಗಪ್ಪ ಮತ್ತು ಅಶೋಕ ಹೊಡೆದಾಡಿಕೊಂಡ ಗೆಳೆಯರು. ಪಕ್ಷವೊಂದರ ಪ್ರಚಾರಕ್ಕೆ ಹೋದರೂ ಹಣ ಕೊಟ್ಟಿಲ್ಲ ಎಂಬ ವಿಷಯವಾಗಿ ಇಬ್ಬರು ನಡುವೆ ಜಗಳವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಗಿದ್ದೇನು?:
ಪಕ್ಷವೊಂದರ ಪ್ರಚಾರಕ್ಕೆ ಹೋದರೂ ಹಣ ಕೊಟ್ಟಿಲ್ಲ ಎಂದು ಇಬ್ಬರು ಮಾತನಾಡುತ್ತಿದ್ದರು. ಈ ವೇಳೆ ನನಗೂ ಹಣ ಕೊಟ್ಟಿಲ್ಲ ಅಂತ ಅಶೋಕ ಬೈಯಲು ಆರಂಭಿಸಿದ್ದ. ಇದನ್ನು ವಿರೋಧಿಸಿದ ನಾಗಪ್ಪ, ಹಣ ಕೊಟ್ಟಿಲ್ಲವೆಂದು ಯಾಕೆ ಬೈತಿಯಾ? ಇದು ಸರಿಯಲ್ಲ ಎಂದು ಹೇಳಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಚರ್ಚೆ ನಡೆದಿದ್ದು, ವಿಕೋಪಕ್ಕೆ ಹೋಗಿದೆ.

ಚರ್ಚೆ ವಿಕೋಪಕ್ಕೆ ಹೋಗಿ, ಚಪ್ಪಲಿ ಹಿಡಿದುಕೊಂಡು ಹೊಡೆದಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ಜಗಳವನ್ನ ಬಿಡಿಸಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *