ಪತಿಯನ್ನು ವಾಕಿಂಗ್ ಕಳುಹಿಸಿ ಗರ್ಭಿಣಿ ಪೇದೆ ನೇಣಿಗೆ ಶರಣು

Public TV
1 Min Read

ಗದಗ: ಗರ್ಭಿಣಿ ಮಹಿಳಾ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಪೊಲೀಸ್ ವಸತಿ ಗೃಹದಲ್ಲಿ ನಡೆದೆ.

ಸೀಮಾ ಶಿವನಗೌಡ್ರ(24) ಆತ್ಮಹತ್ಯೆ ಮಾಡಿಕೊಂಡ ಪೋಲಿಸ್ ಪೇದೆಯಾಗಿದ್ದು, 2016ರ ಬ್ಯಾಚ್ ನ ಮಹಿಳಾ ಪೋಲಿಸ್ ಪೇದೆಯಾಗಿದ್ದಾರೆ. 2018ರ ಡಿಸೆಂಬರ್ 17 ರಂದು ಪ್ರೇಮ ವಿವಾಹವಾಗಿತ್ತು. ಮೂರು ತಿಂಗಳ ಗರ್ಭಿಣಿ ಕೂಡಾ ಆಗಿದ್ದರು. ಇಂದು ಬೆಳಗ್ಗೆ ವಸತಿ ಗೃಹದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೀಮಾ ಚನ್ನಮ್ಮ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೀಮಾ 2018ರಲ್ಲಿ ಪ್ರೇಮ ವಿವಾಹವಾಗಿದ್ದರು. ಪತಿ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಪ್ರೇಮ ವಿವಾಹಕ್ಕೆ ಹುಡುಗಿಯ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹುಡುಗನ ಮನೆಯಲ್ಲಿ ಒಪ್ಪಿಗೆ ಇತ್ತು ಎನ್ನಲಾಗಿದೆ.

ಇಂದು ಬೆಳಗ್ಗೆ 5.30ಕ್ಕೆ ಏಕಾಏಕಿ ರಾಜ್ಯೋತ್ಸವ ಕಾರ್ಯಕ್ರಮವಿದ್ದು, ಚೆನ್ನಮ್ಮ ಪೊಲೀಸ್ ಪಡೆಯಿಂದ ನಾನೂ ಬೇಗ ಹೋಗಬೇಕು ಎಂದು ಪತಿಯನ್ನು ಬೇಗ ಎಬ್ಬಿಸಿದ್ದಾರೆ. ಪತಿಯನ್ನು ಬೇಗ ಎಬ್ಬಿಸಿ ವಾಕಿಂಗ್‍ಗೆ ಕಳುಹಿಸಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *