ಹೊಸಪೇಟೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ನಾಲ್ವರು ಮಹಿಳೆಯರ ರಕ್ಷಣೆ

By
1 Min Read

ಬಳ್ಳಾರಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೊಸಪೇಟೆಯ ಲಾಡ್ಜ್ ಮೇಲೆ ದಾಳಿ ನಡೆದಿದ್ದು, ನಾಲ್ವರು ಮಹಿಳೆಯರನ್ನು (Women Rescued) ರಕ್ಷಣೆ ಮಾಡಲಾಗಿದೆ. ವಿಜಯನಗರದ (Vijayanagar) ಹೊಸಪೇಟೆಯ ರಾಣಿಪೇಟ್‍ನಲ್ಲಿ ಒಡನಾಡಿ ಸಂಸ್ಥೆ ಮತ್ತು ಹೊಸಪೇಟೆ ಪಟ್ಟಣ ಪೊಲೀಸರಿಂದ ಜಂಟಿ ದಾಳಿ ನಡೆದಿದೆ.

ಲಾಡ್ಜ್ ನ ನೆಲಮಹಡಿಯಲ್ಲಿ ವೇಶ್ಯಾವಾಟಿಕೆ (Prostitution) ನಡೆಯುತ್ತಿತ್ತು. ಇದನ್ನು ಅರಿತಿದ್ದ ಪೊಲೀಸರ ತಂಡ ಲಾಡ್ಜ್ ಮೇಲೆ ದಾಳಿ ಮಾಡಿದೆ. ಈ ವೇಳೆ ಲಾಡ್ಜ್‍ನಲ್ಲಿದ್ದ 6ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ದಂಧೆಯಲ್ಲಿ ತೊಡಗಿದ ಸಂತ್ರಸ್ತ ಮಹಿಳೆಯರ ರಕ್ಷಣೆ ಮಾಡಲಾಗಿದೆ.

ಕೂಡ್ಲಿಗಿ ಮೂಲದ ಓರ್ವ ಮಹಿಳೆ, ಕೋಲ್ಕತ್ತಾದ ಇಬ್ಬರು ಮಹಿಳೆಯರು ಹಾಗೂ ಆಂಧ್ರ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಕೋಲ್ಕತ್ತಾ ಪುರುಷರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಹೆಚ್ಚುವರಿ ಮೋಮೊ ಸಾಸ್ ಕೇಳಿದ್ದಕ್ಕೆ‌ ಮುಖಕ್ಕೆ ಚಾಕುವಿನಿಂದ ಇರಿದ!

ಈ ಘಟನೆ ಹೊಸಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article