ಪತ್ರಕರ್ತ ರವಿ ಬೆಳಗೆರೆಗೆ 1 ವರ್ಷ ಜೈಲು- ಬಂಧನಕ್ಕೆ ಕಾದು ಕುಳಿತ ಬೆಂಗ್ಳೂರು ಸಿಸಿಬಿ ಪೊಲೀಸರು

Public TV
1 Min Read

ಧಾರವಾಡ: ಶಾಸಕರ ಬಗ್ಗೆ ಮಾನಹಾನಿಕರ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸದನ ಸಮಿತಿ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳೆಗೆರೆಯವರನ್ನ ಬಂಧಿಸಲು ಬೆಂಗಳೂರು ಸಿಸಿಬಿ ಪೊಲೀಸರು ಕಾಯುತ್ತಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸರೂ ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಜೈಲು ಶಿಕ್ಷೆ ಪ್ರಕಟವಾದ ಬಗ್ಗೆ ಆಸ್ಪತ್ರೆಯಲ್ಲಿದ್ದುಕೊಂಡೇ ಪ್ರತಿಕ್ರಿಯೆ ನೀಡಿರೋ ರವಿ ಬೆಳಗೆರೆ, ನನಗೆ 1 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ನಾನು ಹೈ ಕೋರ್ಟ್ ಅಲ್ಲ ಸುಪ್ರೀಂ ಕೋರ್ಟ್ ತನಕ ಹೋಗಿ ಬಡಿದಾಡ್ತೀನಿ. ಇನ್ನು ಈ ಸರ್ಕಾರಕ್ಕೆ, ಕೇವಲ ಒಂದು ವರ್ಷ ಇದೆ ಎಲೆಕ್ಷನ್‍ಗೆ. ಇವರ ಜೀವನ ಮುಗಿಯಿತು ಇಲ್ಲಿಗೆ. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ? ಯಾವುದಕ್ಕಾದ್ರೂ ನನ್ನನ್ನ ಯಾಕೆ ದೂಷಿಸುತ್ತೀರಿ? ಇದು ಬಹಳ ಧಮನಕಾರಿ ಆಕ್ರಮಣ. ನಾನು ಇದರ ವಿರುದ್ಧ ಇದ್ದೀನಿ. ನಾನು ವ್ಯವಸ್ಥೆ ವಿರುದ್ಧ ಇರುತ್ತೇನೆ. ಕೈ ಕಾಲು ಇಲ್ಲದವನಲ್ಲ, ದಡ್ಡನಲ್ಲ, ಮೂರ್ಖನಲ್ಲ. ಬೇಕಾದ್ದು ಮಾಡಲಿ. ಹೋರಾಟ ಮಾಡದೇ ಕೈ ಕಟ್ಟಿ ಶರಣಾಗುವ ಪರಿಸ್ಥಿತಿ ನನಗಿಲ್ಲ. ಅಂತಹದ್ದು ಬಂದ್ರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ ಅಂದ್ರು.

ಕಾಂಗ್ರೆಸ್ ನ ಎಂ.ಬಿ.ನಾಗರಾಜ ವಿರುದ್ಧದ ಪ್ರಕರಣದಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಿದ ದೂರಿನ ಮೇಲೆ 1 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹಕ್ಕು ಬಾಧ್ಯತಾ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಸದನ ಅಂಗೀಕರಿಸಿತ್ತು.

https://www.youtube.com/watch?v=NTHycVatfSM&feature=youtu.be

Share This Article
Leave a Comment

Leave a Reply

Your email address will not be published. Required fields are marked *