ಮಡಿಕೇರಿ: ಸುಜಾತಾ ಭಟ್ (Sujatha Bhat) ಅವರು ಕ್ಷಣಕ್ಷಣಕ್ಕೂ ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ನನ್ನ ಸಹೋದರಿ ವಸಂತಿ ಎಷ್ಟು ತಾಯಿಂದಿರಿಗೆ ಮಗಳು ಆಗಲು ಸಾಧ್ಯ. ಮೊದಲು ಸುಜಾತಾ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ವಾಸಂತಿ ಸಹೋದರ ಎಂ.ವಿಜಯ್ ಅಕ್ರೋಶ ಹೊರಹಾಕಿದ್ದಾರೆ.
ಕೊಡಗಿನ ವಿರಾಜಪೇಟೆಯಲ್ಲಿ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತಾನಾಡಿದ ಅವರು, ಈ ಧರ್ಮಸ್ಥಳ ಪ್ರಕರಣದ ಬಗ್ಗೆ ಹಾಗೂ ಸುಜಾತಾ ಭಟ್ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಎಳೆಎಳೆಯಾಗಿ ಅವರ ಮುಖವಾಡ ಬಿಚ್ಚುಡುತ್ತಿದೆ. ಹೀಗಾಗಿ, ಮೊದಲು ಪಬ್ಲಿಕ್ ಟಿವಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ
ಸುಜಾತಾ ಭಟ್ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ಮಗಳು ಅಲ್ಲ ಅನ್ನುತ್ತಾರೆ, ಬೆಳಿಗ್ಗೆ ಮಗಳು ಎನ್ನುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ನನ್ನ ಸಹೋದರಿ ವಾಸಂತಿ ಎಷ್ಟು ಜನರಿಗೆ ಮಗಳು ಆಗಬೇಕು? ಎಲ್ಲರಿಗೂ ಮಗಳ ಇವಳು? ಎಲ್ಲಾ ಸುಳ್ಳು ಹೇಳುತ್ತ ಇದ್ದಾರೆ. ಈ ಹಿಂದೆ ಸುಜಾತಾ ಭಟ್ ಅವರು ವಿರಾಜಪೇಟೆಗೆ ಬಂದು ಡೆತ್‌ಸರ್ಟಿಫಿಕೇಟ್ ತೆಗೆದುಕೊಂಡು ಹೋಗಿದ್ದಾರೆ. ಯಾವಾಗ ಬಂದು ತೆಗೆದುಕೊಂಡು ಹೋಗಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ. ಸುಜಾತಾ ಭಟ್ ಅವರ ಬಾಯಿಯಿಂದಲೇ ಮಾಧ್ಯಮಗಳ ಮುಖಾಂತರ ಕೇಳಿದ್ದೇನೆ. ವಾಸಂತಿ ಅವರ ಪಾಸ್‌ಪೋರ್ಟ್ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವರ ಪೋಟೊ ಆಲ್ಬಮ್, ಬಟ್ಟೆಗಳು ಸೇರಿದಂತೆ ಸುಮಾರು 15 ಲಕ್ಷದಷ್ಟು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
2004 ರಿಂದ ರಂಗಪ್ರಸಾದ್ ಹಾಗೂ ಸುಜಾತಾ ಭಟ್ ಅವರೊಂದಿಗೆ ಸಂಬಂಧ ಇದೆ. ಸುಜಾತಾ ಭಟ್ ಅವರ ಮೇಲೆ ಸಾಕಷ್ಟು ಅನುಮಾನ ಇದೆ. ವಾಸಂತಿ ಸತ್ತ ಸಂದರ್ಭದಲ್ಲೇ ಅದು ಅನುಮಾನದ ಸಾವು ಎಂದು ದೂರು ನೀಡಿದ್ದೆವು. ಸಿಬಿಐ ತನಿಖೆ ಆಗಿತ್ತು. ಅದರಲ್ಲಿ ಆತ್ಮಹತ್ಯೆ ಎಂದು ವರದಿ ಬಂದಿದೆ. ನನ್ನ ಬಳಿ ವಾಸಂತಿ ಭಟ್ ಅವರ ಹಲವಾರು ದಾಖಲೆಗಳು ಇವೆ. ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್ ಚಿನ್ನಯ್ಯನ ಅಣ್ಣ ಪೊಲೀಸರ ವಶಕ್ಕೆ
ಸುಜಾತಾ ಭಟ್ ಅವರು ಒಂದಲ್ಲ ಒಂದು ಸುಳ್ಳು ಹೇಳಿಕೊಂಡು ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಪೊಲೀಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ವಿಜಯ್ ಒತ್ತಾಯಿಸಿದ್ದಾರೆ.