ಟಿಬೇಟಿಯನ್‌ಗೆ ಮಾರಾಟ ಮಾಡುತ್ತಿದ್ದ 8 ಲಕ್ಷ ಮೌಲ್ಯದ ಚರಸ್ ವಶಕ್ಕೆ; ಆರೋಪಿ ಬಂಧನ

1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 8 ಲಕ್ಷ ಮೌಲ್ಯದ 781 ಗ್ರಾಮ್ ಚರಸ್‌ ಅನ್ನು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮುಂಡಗೋಡಿನ ಸುಭಾಷ್ ನಗರದ ಇಂಜಿನಿಯರ್ ವೃತ್ತಿಯಲ್ಲಿ ಇರುವ ಸಚಿನ್ ಟೇಕಬಹುದ್ದೂರ್ ಗೋರ್ಖಾ (26) ಬಂಧಿತ ಆರೋಪಿಯಾಗಿದ್ದಾನೆ.

ಖಚಿತ ಮಾಹಿತಿ ಪಡೆದ ಮುಂಡಗೋಡು ಠಾಣೆಯ ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಹಾಗೂ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರು ನೇತೃತ್ವದ ತಂಡವು ಮುಂಡಗೋಡು ನಗರದ ಬಸ್ ಡಿಫೋ ಹತ್ತಿರ ಬೈಕ್‌ನಲ್ಲಿ ಚರಸ್ ಮಾರಾಟ ಮಾಡುವಾಗ ದಾಳಿ ನಡೆಸಿ ಬಂಧನ ಮಾಡಿದ್ದಾರೆ. ಮುಂಡಗೋಡು (mundgod) ಟಿಬೇಟಿಯನ್ ಕ್ಯಾಂಪ್‌ಗೆ ಈ ಚರಸ್ ಅನ್ನು ಮಾರಾಟ ಮಾಡಲು ತಂದಿರುವ ಕುರಿತು ಈತನ ಮೇಲೆ ಆರೋಪವಿದೆ.

ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

Share This Article