ಮಾಂಸಕ್ಕಾಗಿ ಗೋವು ಸಾಗಾಟ – ಪುಂಜಾಲಕಟ್ಟೆಯಲ್ಲಿ ಮನೆಯೇ ಜಪ್ತಿ

1 Min Read

ಮಂಗಳೂರು: ಹತ್ಯೆ ಮಾಡಿ ಮಾಂಸಕ್ಕಾಗಿ ಗೋವನ್ನು ನೀಡಿರುವ ಮನೆ ಹಾಗೂ ಕೊಟ್ಟಿಗೆಯನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುಂಜಾಲಕಟ್ಟೆ (Punjalkatte) ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಟ್ವಾಳದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ (Illegal Cow Transport) ಮಾಡುತ್ತಿದ್ದರು. ಈ ವೇಳೆ ಪುಂಜಾಲಕಟ್ಟೆ ಪೊಲೀಸರು, ಗೂಡ್ಸ್ ಆಟೋವನ್ನು ತಡೆದು ಪರಿಶೀಲಿಸಿದ್ದಾರೆ. ಅದರಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿತ್ತು.  ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮ್ಯೂಸಿಕ್ ಮೈಲಾರಿ ಸೇರಿ 7 ಜನರ ವಿರುದ್ಧ ಪೋಕ್ಸೊ ಕೇಸ್

 

ಈ ವೇಳೆ ವಾಹನದ ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಆತ ತಾನು ಬಂಟ್ವಾಳದ ಶ್ರೀಧರ ಪೂಜಾರಿ (56) ಎಂಬುದಾಗಿ ತಿಳಿಸಿದ್ದಾನೆ. ಈ ಜಾನುವಾರನ್ನು ಬಂಟ್ವಾಳ ಸರಪಾಡಿಯ ಭೋಜ ಮೂಲ್ಯ ಎಂಬುವರ ಮನೆಯಿಂದ ಯಾವುದೇ ದಾಖಲಾತಿ ಪರವಾನಿಗೆ ಇಲ್ಲದೇ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡಿರುವುದಾಗಿ ಹೇಳಿದ್ದಾನೆ.

ಈ ಹಿನ್ನೆಲೆಯಲ್ಲಿ ಜಾನುವಾರು, ಆಟೋರಿಕ್ಷಾ ಹಾಗೂ ಒಂದು ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆಯಲಾಗಿದೆ. ಭೋಜ ಮೂಲ್ಯರವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Share This Article