ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ

Public TV
1 Min Read

ಹುಬ್ಬಳ್ಳಿ: ಕೊಪ್ಪಳ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ತೆರಿಗೆ ಉಪನಿರ್ದೇಶಕ ಎಸ್.ಎಂ ಚವ್ಹಾಣ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು, ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದೆ.

ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ನಿವಾಸದಲ್ಲಿ ಅಪಾರ ಪ್ರಮಾಣದ ನಗದು, ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದೆ. ಅಲ್ಲದೇ ವಿವಿಧ ಕಡೆ ಇರುವ 12 ಸೈಟ್, ಮೂರು ಮನೆ, ಆರು ಎಕರೆ ಜಮೀನಿನ ದಾಖಲೆ ಸಹ ಲಭ್ಯವಾಗಿದೆ. ಭಾರೀ ಪ್ರಮಾಣದ ನಗದು ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ಹಣ ಎಣಿಕೆ ಯಂತ್ರ ತಂದಿದ್ದಾರೆ. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಹಣ ಎಣಿಕೆ ಯಂತ್ರದ ವ್ಯವಸ್ಥೆ ಮಾಡಿದ್ದು, ಇದರೊಂದಿಗೆ ಮತ್ತೊಂದು ಪ್ರಿಂಟಿಂಗ್ ಯಂತ್ರ ಕೂಡ ತರಲಾಗಿದೆ. ಹಣ ತೆಗೆದುಕೊಂಡು ಹೋಗಲು ಟ್ರಂಕ್ ಸಹ ತರಲಾಗಿದೆ. ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದ ದೋಹಾಗೆ ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕ್ಯಾಲಿಕಟ್‌ಗೆ ವಾಪಸ್

ಇನ್ನು ಲೋಕಾ ಸಿಬ್ಬಂದಿ ಸೈಟ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಬೆಳ್ಳಿ ದೇವರ ಮಂಟಪ, ಬಂಗಾರದ ಗಣೇಶ ಮೂರ್ತಿ ಸಹ ಪತ್ತೆಯಾಗಿದೆ. ಡಿವೈಎಸ್‌ಪಿ ಆರ್ ವಸಂತ್ ಕುಮಾರ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೂ ಮನೆಯ ಎರಡು ಕೊಠಡಿಗಳನ್ನು ಮಾತ್ರ ತಪಾಸಣೆ ಮಾಡಲಾಗಿದೆ. ಇನ್ನೂ ಒಂದು ಕೊಠಡಿಯ ಪರಿಶೀಲನೆ ಬಾಕಿ ಉಳಿದಿದೆ. ಹಲವಾರು ಪ್ರಮಾಣದ ಆಸ್ತಿ ಪತ್ತೆ ಹಿನ್ನೆಲೆ ಹುಬ್ಬಳ್ಳಿ ನಿವಾಸಕ್ಕೆ ಲೋಕಾಯುಕ್ತ ಎಸ್‌ಪಿ ಭೇಟಿ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ – ರಾಮನಗರದಲ್ಲಿ ವಾಟಾಳ್ ಪ್ರತಿಭಟನೆ

ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಹಿನ್ನೆಲೆ, ಇಲ್ಲಿಯವರೆಗೆ 52 ಲಕ್ಷ ಹಣವನ್ನು ಅಧಿಕಾರಿಗಳು ಎಣಿಸಿದ್ದಾರೆ. ಎಣಿಕೆ ಕಾರ್ಯ ಇನ್ನೂ ಮುಂದುವರಿದಿದೆ. ಇಲ್ಲಿಯವರೆಗೂ 1 ಕೆಜಿ ಚಿನ್ನ, 3 ಕೆಜಿ ಬೆಳ್ಳಿ, 13 ಸೈಟ್, ಆರೂವರೆ ಎಕರೆ ಜಮೀನು ಹಾಗೂ ಮೂರು ಮನೆಗಳ ದಾಖಲೆಗಳು ಪತ್ತೆಯಾಗಿವೆ. ಇದನ್ನೂ ಓದಿ: ಜಗದೀಪ್‌ ಧನಕರ್‌ ರಾಜೀನಾಮೆ – ಉಪ ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ

Share This Article