ನ್ಯೂ ಇಯರ್ ಸಂಭ್ರಮದಲ್ಲಿದ್ದವರಿಗೆ ಶಾಕ್; ಅನುಮತಿ ಇಲ್ಲದೇ ಪಾರ್ಟಿ ನಡೆಸುತ್ತಿದ್ದ ರೆಸಾರ್ಟ್‌ ಮೇಲೆ ಪೊಲೀಸರ ದಾಳಿ

0 Min Read

ದೊಡ್ಡಬಳ್ಳಾಪುರ: ಹೊಸ ವರ್ಷದ ಸಂಭ್ರಮದಲ್ಲಿದ್ದವರಿಗೆ ಪೊಲೀಸರು ಶಾಕ್‌ ಕೊಟ್ಟಿದ್ದಾರೆ. ಅನುಮತಿ ಇಲ್ಲದೇ ಪಾರ್ಟಿ ನಡೆಸುತ್ತಿದ್ದ ರೆಸಾರ್ಟ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದೊಡ್ಡಬಳ್ಳಾಪುರದ ಹೆಗ್ಗಡಿಹಳ್ಳಿ ಬಳಿಯ ಈಚೀಸ್ ರೆಸಾರ್ಟ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಸಿಪಿಐ ಸಾಧಿಕ್ ಪಾಷಾ ಹಾಗೂ ಪೋಲೀಸರು ದಾಳಿ ಮಾಡಿದ್ದಾರೆ.‌

40 ಮಂದಿ ಯುವಕರಿಂದ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದಾಳಿ ವೇಳೆ ಸಾಕಷ್ಟು ಮದ್ಯ ವಶಕ್ಕೆ ಪಡೆಯಲಾಗಿದೆ. ಮದ್ಯದ ಬಾಟಲಿ, ಸೌಂಡ್ ಬಾಕ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಸಗಿ ರೆಸಾರ್ಟ್ ಮಾಲೀಕನ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article