ಜೂಜು ಅಡ್ಡೆ ಮೇಲೆ ಪೊಲೀಸ್ ರೈಡ್ – 70 ಜನ ಅರೆಸ್ಟ್

Public TV
1 Min Read

ಬೆಳಗಾವಿ: ರಾಜಾರೋಷವಾಗಿ ನಡೆಸುತ್ತಿದ್ದ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ಸಿಇಎನ್ ಪೊಲೀಸರು (Police) ದಾಳಿ ನಡೆಸಿ 70 ಜನರನ್ನು ಬಂಧಿಸಿದ ಘಟನೆ ಬೈಲಹೊಂಗಲದಲ್ಲಿ (Bailhongal) ನಡೆದಿದೆ.

ಖಚಿತ ಮಾಹಿತಿ ಮೇರೆಗೆ ನಗರದ ಬಾರ್ & ರೆಸ್ಟೋರೆಂಟ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜು ಅಡ್ಡೆಯಲ್ಲಿ ಪ್ರಮುಖ ಆರೋಪಿ ಮಹಾಂತೇಶ್ ತುರುಮುರಿ ಸೇರಿ 70 ಜನ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಎರಡು ಬಸ್‍ಗಳಲ್ಲಿ ಬೆಳಗಾವಿಗೆ ಕರೆತಂದಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಭೇಟಿಗೆ ಬಂದಿದ್ದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ- ವೀಡಿಯೋ ವೈರಲ್

ಬಂಧಿತರಿಂದ 2 ಲಕ್ಷ ರೂ. ನಗದು, 70 ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಲಾಗಿದೆ. ಸಿಇಎನ್ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ 10 ಜನ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಬೆಳಗಾವಿ (Belgavi) ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಬಸ್‌ ಅಪಘಾತ – ನಾಲ್ವರು ಸಾವು, 28 ಮಂದಿಗೆ ಗಾಯ

Share This Article