ಚಿಕ್ಕಮಗಳೂರು: ನವೆಂಬರ್ 26ರಿಂದ ಆರಂಭಗೊಂಡಿರುವ ಚಿಕ್ಕಮಗಳೂರು (Chikkamagaluru) ತಾಲೂಕಿನ ದತ್ತಪೀಠದ (Datta Peeta ದತ್ತಜಯಂತಿ (Datta Jayanti) ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ಬಂದಿದೆ. ನಾಳೆ (ಡಿ.2) ರಂದು 2-3 ಸಾವಿರ ಮಹಿಳೆಯರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಬಳಿಕ ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿಯನ್ನು ಪೂಜಿಸಿ, ಅನುಸೂಯ ಜಯಂತಿ (Anusuya Jayanti) ಆಚರಿಸಲಿದ್ದಾರೆ.
ಡಿ.3 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸುಮಾರು 20-25 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಡಿ.4ರಂದು ರಾಜ್ಯದ ಮೂಲೆ-ಮೂಲೆಗಳಿಂದ ಬರುವ 15 ಸಾವಿರಕ್ಕೂ ಅಧಿಕ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಇದನ್ನೂ ಓದಿ: ದತ್ತಪೀಠ ಹಿಂದೂಗಳದ್ದು, ಮೈಸೂರು ಅರಸರು ಸಾವಿರಾರು ಎಕರೆ ದಾನ ನೀಡಿದ ದಾಖಲೆಗಳಿವೆ: ವಿಹೆಚ್‌ಪಿ
ದತ್ತ ಜಯಂತಿಯ ಕಡೇ 3 ದಿನಗಳಾದ ಡಿಸೆಂಬರ್ 2-3-4 ಸೂಕ್ಷ್ಮ ದಿನಗಳಾಗಿದ್ದು, ಜಿಲ್ಲಾದ್ಯಂತ 6000ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಪೊಲೀಸರ ಸರ್ಪಗಾವಲಿನಲ್ಲೇ ದತ್ತಜಯಂತಿ ನಡೆಯಲಿದೆ. ಮೂರು ದಿನಗಳ ಕಾಲ 500ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳು, 25ಕ್ಕೂ ಹೆಚ್ಚು ಡ್ರೋನ್‌ಗಳು ಹದ್ದಿನ ಕಣ್ಣಿಡಲಿವೆ.
ಬಂದೋಬಸ್ತ್ ಸಲುವಾಗಿ ಸೋಮವಾರ ನಗರದ ಪ್ರಮುಖ ರಸ್ತೆಯಲ್ಲಿ ಎಸ್‌ಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ. ಇದನ್ನೂ ಓದಿ: ದತ್ತಪೀಠ | ನ.26ರಿಂದ ದತ್ತ ಜಯಂತಿ – ಟ್ರಾಫಿಕ್ ಜಾಮ್ ತಡೆಗೆ ಲಾಂಗ್ ಚಾರ್ಸಿ ವಾಹನಗಳಿಗೆ ನಿಷೇಧ


