ಕೆಲಸಕ್ಕೆ ರೆಸ್ಟ್ ಕೊಟ್ಟು ಕುಟುಂಬಸ್ಥರೊಂದಿಗೆ ಪೊಲೀಸರ ಸಖತ್ ಡ್ಯಾನ್ಸ್

Public TV
1 Min Read

ಯಾದಗಿರಿ: ಒತ್ತಡದ ನಡುವೆ ಸದಾ ಕೈಯಲ್ಲಿ ಲಾಠಿ ಹಿಡಿದು ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬದವರಿಗೆ ಸಮಯ ಕೊಡುವುದಿಲ್ಲ ಎಂಬ ಮಾತಿದೆ. ಹೀಗಾಗಿ ತಮ್ಮ ಕುಟುಂಬಸ್ಥರ ಮನ ತಣಿಸಲು ಯಾದಗಿರಿಯಲ್ಲಿ ಪೊಲೀಸ್ ಇಲಾಖೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಸಖತ್ ಡ್ಯಾನ್ಸ್ ಮಾಡಿದ್ದಾರೆ.

ನಗರದ ಹೊಸ ವರ್ಷದ ಬಂದೊಬಸ್ತ್ ಮುಗಿಸಿ ಬುಧವಾರ ತಡರಾತ್ರಿ ತಮ್ಮ ಕುಟುಂಬಸ್ಥರೊಂದಿಗೆ ಹೊಸ ವರ್ಷವನ್ನು ಪೊಲೀಸರು ಬರಮಾಡಿಕೊಂಡರು. ಯಾವಾಗಲೂ ಅಪರಾಧ ಪತ್ತೆ ಹಚ್ಚುವ ಕಾರ್ಯ, ಪ್ರತಿಭಟನೆಗೆ, ಭದ್ರತೆ ಹೀಗೆ ಬ್ಯುಸಿ ಕೆಲಸದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಪತ್ನಿ, ಮಕ್ಕಳು, ತಂದೆ ತಾಯಿಯಂದಿರ ಜೊತೆ ಹೊಸ ವರ್ಷ ಆಚರಣೆ ಮಾಡಿ ಖುಷಿಪಟ್ಟರು.

ಸುರಪುರ ಡಿವೈಎಸ್‍ಪಿ ಶಿವನಗೌಡ ಪಾಟೀಲ್, ಸಿಪಿಐಗಳಾದ ಹನುಮರೆಡ್ಡಿ, ಆನಂದ್ ರಾವ್ ಸೇರಿದಂತೆ ಅವರ ಸಿಬ್ಬಂದಿ ಶಹಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮೂರು ಪೆಗ್ಗಿಗೆ ಮತ್ತು ಪಾನ್ ವಾಲ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *