`ಕರಿಯಾ’ ಸಿನಿಮಾ ರೀ ರಿಲೀಸ್ ವೇಳೆ ಪುಂಡಾಟಿಕೆ – ಬೆಂಗಳೂರಲ್ಲಿ ಕೆಲ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸ್!

By
2 Min Read

– ದರ್ಶನ್ ವಿರುದ್ಧ 4,500 ಪುಟಗಳ ಚಾರ್ಜ್‌ಶೀಟ್‌ ಸಿದ್ಧ

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ (Darshan) ಬೆಂಗಳೂರು ಜೈಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಹೊತ್ತಲ್ಲೇ 2003ರಲ್ಲಿ ತೆರೆ ಕಂಡಿದ್ದ ʻಕರಿಯಾʼ ಸಿನಿಮಾ (Kariya Cinema) ರೀರಿಲೀಸ್ ಆಗಿದೆ. ಎಂದಿನಂತೆ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದರ ನಡುವೆ ಕೆಲ ಅಭಿಮಾನಿಗಳು ಅಲ್ಲಲ್ಲಿ ಪುಂಡಾಟಿಕೆ ಮೆರೆದಿದ್ದಾರೆ.

ಬೆಂಗಳೂರಿನ (Bengaluru) ಪ್ರಸನ್ನ ಚಿತ್ರಮಂದಿರದ ಬಳಿ ಉದ್ಧಟತನದ ವರ್ತನೆ ತೋರುತ್ತಿದ್ದವರಿಗೆ ಪೊಲೀಸರು ಮೈಕ್ ಹಿಡಿದು ವಾರ್ನಿಂಗ್ ನೀಡಿದ್ರು. ನಿಮ್ಮಂತಹ ಅಭಿಮಾನಿಗಳಿಂದ (Darshan Fans) ದರ್ಶನ್‌ಗೆ ಕೆಟ್ಟ ಹೆಸರು.. ನಿಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು… ಅಂತ ಬುದ್ಧಿವಾದ ಹೇಳಿದ್ದರು.. ಆದ್ರೂ, ಕೆಲವರು ತಮ್ಮ ವರ್ತನೆ ಬದಲಿಸಿಕೊಳ್ಳಲಿಲ್ಲ. ಬದಲಾಗಿ ಬಾಯಿಗೆ ಬಂದಂತೆ ನಿಂದಿಸುತ್ತಾ ಥೇಟರ್ ಬಾಗಿಲು ಹಾಕಿಕೊಂಡರು. ಆದ್ರೂ, ಬಿಡದ ಪೊಲೀಸರು, ಥೇಟರ್ ಬಾಗಿಲು ತೆಗೆಸಿ ಮೂವರನ್ನು ವಶಕ್ಕೆ ಪಡೆದರು. ಬಳಿಕ ಪುಂಡಾಟಿಕೆ ಮೆರೆದ ಅಭಿಮಾನಿ ತಪ್ಪಾಯ್ತು ಅಂತಾ ಕ್ಷಮೆ ಕೇಳಿದರು. ಇದನ್ನೂ ಓದಿ: ಬೆಂಗಳೂರು ಹೋಟೆಲ್‌ನಲ್ಲಿ ನಟನಿಗೆ ನಿರ್ಮಾಪಕ ರಂಜಿತ್ ಲೈಂಗಿಕ ಕಿರುಕುಳ- ದೂರು ದಾಖಲು

ಇನ್ನೂ ಥೇಟರ್ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ರು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸನ್ನ ಥೇಟರ್‌ನಲ್ಲಿ ರಾತ್ರಿ 10.30ರ ಪ್ರದರ್ಶನವನ್ನು ಪೊಲೀಸರು ಕ್ಯಾನ್ಸಲ್ ಮಾಡಿಸಿದ್ದಾರೆ. ಇನ್ನು, ಬಳ್ಳಾರಿಯಲ್ಲಿಯೂ ದರ್ಶನ್‌ರ ಕೆಲ ಅಭಿಮಾನಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ‘ಕರಿಯಾ’ ಚಿತ್ರ ರೀ-ರಿಲೀಸ್ ವೇಳೆ ದರ್ಶನ್ ಪುಂಡಾಭಿಮಾನಿಗಳಿಗೆ ಖಾಕಿ ವಾರ್ನಿಂಗ್

4,500 ಪುಟಗಳ ಚಾರ್ಜ್‌ಶೀಟ್‌ ರೆಡಿ:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ತನಿಖೆ ಕೊನೆಯ ಹಂತದ ತಲುಪಿದೆ. ನಟ ದರ್ಶನ್ ಮತ್ತು ಅವರ ಗ್ಯಾಂಗ್ ವಿರುದ್ಧ 4,500 ಪುಟಗಳ ಚಾರ್ಜ್‌ಶೀಟ್‌ ಅನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. 100 ಮಂದಿಯನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಸೆಪ್ಟಂಬರ್‌ 10ರ ಒಳಗೆ ಚಾರ್ಜ್‌ಶೀಟ್‌ ಸಲ್ಲಿಸಬೇಕಾಗಿದೆ. ಚಾಜ್‌ಶೀಟ್ ಸಲ್ಲಿಕೆ ವಿಚಾರದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಖುದ್ದು ಮುತುವರ್ಜಿ ವಹಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ಅಂದರೆ ಕಮಿಟ್‌ಮೆಂಟ್: ಲೈಫ್ ಪಾರ್ಟ್ನರ್ ಬಗ್ಗೆ ರಂಜನಿ ರಾಘವನ್ ಓಪನ್ ಟಾಕ್

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್ ವಿಚಾರವಾಗಿ ನಟ ದರ್ಶನ್ ವಿರುದ್ಧ ಇನ್ನೊಂದು ಕೇಸ್ ದಾಖಲಾಗಿದೆ. ರೌಡಿಶೀಟರ್ ಬೇಕರಿ ರಘು ಜೊತೆ ನಟ ದರ್ಶನ್ ಹಾಸಿಗೆಯಲ್ಲಿ ಕುಳಿತಿದ್ದ ಫೋಟೋ ಪ್ರಕರಣ ಸಂಬಂಧ ನಟ ದರ್ಶನ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಹೊಸದಾಗಿ ಎಫ್‌ಐಆರ್ ದಾಖಲಿಸಿಲ್ಲ. ಬದಲಾಗಿ ಮೊನ್ನೆ ದಾಖಲಿಸಿಕೊಂಡಿದ್ದ ಎಫ್‌ಐಆರ್‌ಗೆ, ಈ ಪ್ರಕರಣವನ್ನು ಜೊತೆ ಮಾಡಿದ್ದಾರೆ. ಈ ಸಂಬಂಧ ಶೀಘ್ರವೇ ತನಿಖಾಧಿಕಾರಿಗಳು ಬಳ್ಳಾರಿ ಜೈಲಿಗೆ ತೆರಳಿ ನಟ ದರ್ಶನ್‌ರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಮತ್ತೊಂದು ಕಡೆ, ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಗ್ಯಾಂಗ್ ವಿಕೃತಿಗೆ ಸಾಕ್ಷಿಯಾಗಿದ್ದ 2 ಲಾರಿಗಳ ಮಾಲಿಕರ ಪತ್ತೆಗಾಗಿ ತನಿಖಾ ತಂಡ ಆರ್‌ಟಿಓ ಮೊರೆ ಹೋಗಿದೆ.

Share This Article