ಹೃದಯಾಘಾತದಿಂದ ಹೆಡ್‌ ಕಾನ್ಸ್‌ಟೇಬಲ್ ಸಾವು

1 Min Read

ಕೋಲಾರ: ಹೃದಯಾಘಾತಕ್ಕೊಳಗಾಗಿ (Heart Attack) ಪೊಲೀಸ್ ಮುಖ್ಯಪೇದೆ (Head Constable) ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ತಾಲೂಕಿನ ಸೀಸಂದ್ರ ಗ್ರಾಮದ ವೆಂಕಟರಮಣಪ್ಪ (50) ಮೃತ ದುರ್ದೈವಿ. ವೆಂಕಟರಮಣಪ್ಪ ಕೆಜಿಎಫ್ ಜಿಲ್ಲಾ ಪೊಲೀಸ್‌ನ ಊರಿಗಾಂ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಇತ್ತೀಚಿಗೆ ತೂಕ ಕಡಿಮೆ ಮಾಡುವ ಹಿನ್ನೆಲೆ ವೆಂಕಟರಮಣಪ್ಪ ಡಯಟ್ ಸೇರಿದಂತೆ ಔಷಧ ತೆಗೆದುಕೊಳ್ಳುತ್ತಿದ್ದರು. ಇಂದು ಮುಂಜಾನೆ ಮನೆಯಲ್ಲೇ ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: Delhi | ಪಾಲಂನ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ – 8 ಮಂದಿ ಸಾವು

Share This Article