ಧಾರವಾಡ | ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಳ್ಳರಿಬ್ಬರ ಕಾಲಿಗೆ ಗುಂಡೇಟು

Public TV
2 Min Read

ಧಾರವಾಡ: ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದ ಇಬ್ಬರು ಕಳ್ಳರ ಕಾಲಿಗೆ ಫೈರಿಂಗ್ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೈಕ್ ಮೇಲೆ ಹೊರಡಿದ್ದ ಯುವಕನನ್ನ ನಿಲ್ಲಿಸಿ ಹುಸೇನ್ ಎನ್ನುವವನ ಬಳಿ ಕಳ್ಳತನ ಮಾಡಲು ಯತ್ನಿಸಿದ್ದ. ಈ ಮಾಹಿತಿ ಮೇರೆಗೆ ಆತನನ್ನ ವಶಕ್ಕೆ ಪಡೆದು, ಆತನ ಸಹಚರರ ಬಳಿ ಕರೆದುಕೊಂಡು ಹೋದ ಪೊಲೀಸರ ಮೇಲೆಯೇ ಮತ್ತಿಬ್ಬರು ಕಳ್ಳರು ದಾಳಿ ಮಾಡಿದ್ದರು. ಈ ಹಿನ್ನೆಲೆ ಪೊಲೀಸರು ಕೂಡ ಇಬ್ಬರ ಮೇಲೆ ಪ್ರತಿ ದಾಳಿ ಮಾಡಿ ಬಂಧಿಸಿದ್ದರು. ಇದನ್ನೂ ಓದಿ: ನಕಲಿ ಬಿಲ್ ಪಾವತಿಗಾಗಿ ಹಿರಿಯ ಅಧಿಕಾರಿಗಳ ಕಿರುಕುಳ – ಮಹಿಳಾ ಎಂಜಿನಿಯರ್ ಸೂಸೈಡ್

ಈ ವೇಳೆ ವಿಜಯ ಮತ್ತು ಮುಜಮ್ಮಿಲ್ ಎಂಬ ಕಳ್ಳರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡ ಪಿಎಸ್‌ಐ ಮಲ್ಲಿಕಾರ್ಜುನ ಹಾಗೂ ಪೊಲೀಸ್ ಪೇದೆ ಇಸಾಕ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕನ್ನಡ ಮಾತಾಡಿ ಎಂದಿದ್ದಕ್ಕೆ ರೂಲ್ಸ್ ಇದೆಯಾ ಎಂದು ದರ್ಪ ಮೆರೆದ ಬ್ಯಾಂಕ್ ಸಿಬ್ಬಂದಿ

ಈ ವೇಳೆ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ಬುಧವಾರ ರಾತ್ರಿ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಬಳಿ 3 ಜನ ಕಳ್ಳರು ಓರ್ವನನ್ನು ಅಡ್ಡಗಟ್ಟಿ, ಆತನ ಬೈಕ್ ಕಸಿದುಕೊಳ್ಳಲು ಯತ್ನಿಸಿದರು. ಆ ಕೆಲಸ ಆಗದೇ ಹೋದಾಗ ಅಲ್ಲಿಂದ 3 ಜನ ಪರಾರಿಯಾಗಿದ್ದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಧಾರವಾಡದ 3 ಠಾಣೆಯವರು ಚೆಕ್‌ಪೋಸ್ಟ್ ಹಾಕಿ, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

ಬೆಳಗ್ಗಿನ ಜಾವ ಹುಸೇನ್‌ಸಾಬ್ ಎಂಬಾತನನ್ನು ಹಿಡಿಯಲಾಗಿದ್ದು, ಈತ 35ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂತು. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ಇನ್ನೋರ್ವ ಕಳ್ಳ ಇರುವ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋದ. ಅಲ್ಲಿ ಇಬ್ಬರು ಕಳ್ಳರು ಇದ್ದದ್ದು ಗೊತ್ತಾಯಿತು. ಈ ವೇಳೆ ಹುಸೇನ್‌ಸಾಬ್ ಪೊಲೀಸರನ್ನು ನೂಕಿ ಓಡಿದ್ದ. ಸ್ಥಳದಲ್ಲಿದ್ದ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಎಂಬಾತನನ್ನು ನಮ್ಮ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಪೊಲೀಸರ ಮೇಲೆ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಮೂರು ಸುತ್ತು ಫೈರಿಂಗ್ ನಡೆಸಿದ್ದು, ಆರೋಪಿಗಳ ಕಾಲಿಗೆ ಗುಂಡು ತಾಗಿದೆ. ತಪ್ಪಿಸಿಕೊಂಡ ಹುಸೇನ್‌ಸಾಬ್ ಪತ್ತೆಗೆ ಹುಡುಕಾಟ ನಡೆಯುತ್ತಿದೆ. ಗಾಯಾಳುಗಳು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Share This Article