ಅನಂತ್‌ಕುಮಾರ್ ಹೆಗಡೆ ಬಂಧನ ಮಾಡೋದು ಪೊಲೀಸರು ತೀರ್ಮಾನ ಮಾಡ್ತಾರೆ: ಪರಮೇಶ್ವರ್

By
1 Min Read

ಬೆಂಗಳೂರು: ಸಂಸದ ಅನಂತ್‌ಕುಮಾರ್ ಹೆಗಡೆ (Anantkumar Hegde) ಬಂಧನ ಮಾಡಬೇಕಾ, ಬೇಡ್ವಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಸಂಸದರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಂಸದರ ಮೇಲೆ ಎಫ್‌ಐಆರ್ ಆಗಿದೆ. ಪೊಲೀಸರು ಸಾಕ್ಷ್ಯ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ಅದಾದ ಮೇಲೆ ಮುಂದಿನ ಕ್ರಮ ಏನು ಆಗಬೇಕೋ ಅದು ಕಾನೂನು ರೀತಿ ಆಗುತ್ತದೆ. ಅವರನ್ನು ಅರೆಸ್ಟ್ ಮಾಡಬೇಕಾ, ಮಾಡಬಾರದಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅನಂತ್ ಕುಮಾರ್ ಹೆಗಡೆ

ನಾವು ಗೃಹ ಇಲಾಖೆಯಿಂದ ಯಾವುದೇ ಡೈರೆಕ್ಷನ್ ಕೊಡೋದಿಲ್ಲ. ಅವರನ್ನು ಅರೆಸ್ಟ್ ಮಾಡಿ, ಬಿಡಿ ಅಂತ ನಾನು ಯಾವತ್ತೂ ಯಾರಿಗೂ ಹೇಳಿಲ್ಲ. ಹೇಳೋದು ಇಲ್ಲ. ಸ್ಥಳೀಯ ಪೋಲೀಸರು ಯಾವ ಸೆಕ್ಷನ್ ಹಾಕಬೇಕೋ ಆ ಸೆಕ್ಷನ್ ಹಾಕಿದ್ದಾರೆ. ಆ ಸೆಕ್ಷನ್‌ನಲ್ಲಿ ಅರೆಸ್ಟ್ ಮಾಡಬೇಕು ಎಂದು ಇದ್ದರೆ ಅರೆಸ್ಟ್ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ‘ಪೂಜಿಸಲೆಂದೇ ಹೂಗಳ ತಂದೆ’; ರಾಮನ ಸ್ಮರಿಸುವ ಕನ್ನಡ ಹಾಡಿಗೆ ಮೋದಿ ಫಿದಾ

Share This Article