– ಪೊಲೀಸ್ ಯೂನಿಫಾರ್ಮ್ ಧರಿಸಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಕಳ್ಳ
ಬೆಂಗಳೂರು: ಕೈತುಂಬಾ ಸಂಬಳ ಇದ್ರೂ, ಕಳ್ಳನ ಜೊತೆ ರೂಮ್ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ್ದ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ (Govindapura Police Station) ನಡೆದಿದೆ.
ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ (Police Constable) ಹೆಚ್.ಆರ್ ಸೋನಾರ್, ಕುಖ್ಯಾತ ಸಲೀಂ ಅಲಿಯಾಸ್ ಬಾಂಬೆ ಸಲೀಂ ಜೊತೆ ರೂಂ ಶೇರ್ ಮಾಡಿದ್ದ. ಖದೀಮ ಬಾಂಬೆ ಸಲೀಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪೇದೆಯ ಕಳ್ಳಾಟ ಬಯಲಾಗಿದೆ. ಇದನ್ನೂ ಓದಿ: Raichur| ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿತ – ಶಿಕ್ಷಕಿಗೆ ಗಂಭೀರ ಗಾಯ
ಸಲೀಂ ಮೊಬೈಲ್‌ನಲ್ಲಿ ಸೋನಾರ್‌ನ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ಫೋಟೊಗಳು ಪತ್ತೆಯಾಗಿವೆ. ಪೊಲೀಸ್ ಯೂನಿಫಾರ್ಮ್ ಹಾಕೊಂಡು ಪತ್ನಿಗೆ ಖದೀಮ ಸಲೀಂ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 25 ಲಕ್ಷ ವಂಚನೆ, ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಸೂಸೈಡ್ – ಡೆತ್‌ನೋಟ್‌ನಲ್ಲಿ ಏನಿದೆ?
ವಿಚಾರಣೆಯ ವೇಳೆ ಖದೀಮ ಸಲೀಂ, ಪೊಲೀಸ್ ಕಾನ್ಸ್ಟೇಬಲ್ ಸೋನಾರ್‌ನ ಮನೆಯಲ್ಲಿ ವಾಸವಿದ್ದ ವಿಚಾರ ಬಯಲಾಗಿದೆ. ಕಳ್ಳನ ಜೊತೆ ರೂಂ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಕಾನ್ಸ್ಟೇಬಲ್ ಸೋನಾರ್‌ನನ್ನು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಕೆಲಸದಿಂದ ಅಮಾನತು ಮಾಡಿದ್ದಾರೆ.
ಇದೀಗ ಪೊಲೀಸರು ಸಲೀಂನ ಜೊತೆ ಪೊಲೀಸ್ ಪೇದೆ ಬರೀ ಸ್ನೇಹ ಮಾತ್ರ ಇಟ್ಟುಕೊಂಡಿದ್ನಾ ಅಥವಾ ಬೇರೆ ಲಿಂಕ್ ಇದ್ಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.