ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

Public TV
2 Min Read

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬಡಾ ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಯಾನೇ, ಡಿಯೋ ರಫೀಕ್ ಉಸ್ತುವಾರಿವಾರಿಯಲ್ಲಿ ಉಚ್ಚಿಲ ಭಾಸ್ಕರ ನಗರದಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮ ಕಸಾಯಿಖಾನಿಗೆ ಪೊಲೀಸರು ದಾಳಿ ಮಾಡಿದ್ದಾರೆ.

ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಪಡುಬಿದ್ರಿ ಎಸ್‍ಐ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಭಾರೀ ದನದ ಮಾಂಸ ಸಹಿತ ಜೀವಂತ ದನ ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪಡುಬಿದ್ರೆ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಅಕ್ರಮವಾಗಿ ದನವನ್ನು ಕಡಿಯಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಮಾಂಸ ಮಾರುವವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡಿಕೊಂಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಾರುವೇಷದಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದಾಗ ಜೀವಂತ ಜನ ದನದ ಮಾಂಸ ಮತ್ತು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.  ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

ದಿನಕ್ಕೊಂದು ಮನೆಗಳೇ ಹಸುವಿನ ವಧಾ ಸ್ಥಳ. ಪ್ರಮುಖ ಆರೋಪಿ ರಫೀಕ್ ಯಾನೇ, ಡಿಯೋ ರಫೀಕ್ ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದು, ಇನ್ನೊರ್ವ ಆರೋಪಿ ಮನೆ ಮಾಲೀಕ ಸಾಬನ್ ತಲೆ ಮರೆಸಿಕೊಂಡಿದ್ದಾನೆ. ಉಳಿದಂತೆ ಕಳತ್ತೂರು ಸೂರ್ಯಗುಡ್ಡೆ ನಿವಾಸಿಗಳಾದ ಮಹಮ್ಮದ್ ರಫೀಕ್ (44), ಇಲಿಯಾಸ್ (38), ಉಚ್ಚಿಲ ಭಾಸ್ಕರ ನಗರ ಬಿಸ್ಮಿಲ್ಲಾ ಸ್ಕೋರ್ ಬಳಿ ನಿವಾಸಿ ಮೋಹಿನ್ ಉದ್ಧೀನ್ (17), ಮೂಳೂರು ಸುನ್ನಿ ಸೆಂಟರ್ ಬಳಿ ನಿವಾಸಿ ಮೊಯಿದಿನಬ್ಬ (40) ಬಂಧಿತ ಆರೋಪಿಗಳು ಯಾರಿಗೂ ಸಂಶಯ ಬರಬಾರದು ಎಂದು ದಿನಕ್ಕೊಂದು ಮನೆಯಲ್ಲಿ ಮಾಂಸ ಮಾಡುತ್ತಿದ್ದರು.

ನಿಖರ ಮಾಹಿತಿ ದೊರೆತ ಹಿನ್ನಲೆಯಲ್ಲಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್‍ಐ ಪುರುಷೋತ್ತಮ್ ತಂಡ ಮಸೀದಿ ಸಮೀಪ ಸುತ್ತಲೂ ಮುಸ್ಲಿಂ ಮನೆಗಳಿರುವ ಪ್ರದೇಶದ ಮಧ್ಯೆ ಭಾಗದ ಸಾಬನ್ ಮನೆಯನ್ನೇ ಅಕ್ರಮ ಕಸಾಯಿಖಾನೆಯನ್ನಾಗಿ ಮಾಡಿಕೊಂಡು, ರಾಜಾರೋಷವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದರು. ಈ ವೇಳೆ ದಿಢೀರ್ ದಾಳಿ ನಡೆಸಿದಾಗ ಡಿಯೋ ರಫೀಕ್ ತಪ್ಪಿಸಿಕೊಂಡಿದ್ದಾನೆ. ಸ್ಥಳದಲ್ಲಿದ್ದ ಉಳಿದವರನ್ನು ಪೊಲೀಸ್ ತಂಡ ಬಂಧಿಸಿದೆ. ಮೂರು ದನಗಳನ್ನು ಕಡಿದು ಮಾಂಸ ಮಾಡಲಾದ 400 ಕೆ.ಜಿ ಮಾಂಸ ಸ್ಥಳದಲ್ಲೇ ಪತ್ತೆಯಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

ಪೊಲೀಸ್ ದಾಳಿಯಾಗುತ್ತಿದಂತೆ ಒಂದು ದನದ ಕತ್ತಿಗೆ ಚೂರಿ ಇರಿದ ಪರಿಣಾಮ ಪೊಲೀಸ್ ಮುಂಭಾಗದಲ್ಲೇ ಒದ್ದಾಟ ನಡೆಸಿ ಪ್ರಾಣ ಬಿಟ್ಟಿರುವ ದೃಶ್ಯ ಪೊಲೀಸರ ಕೋಪ ನೆತ್ತಿಗೇರುವಂತೆ ಮಾಡಿದೆ. ಜೀವಂತ ದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಒಂದು ಸ್ಕೂಟರ್ ಸಹಿತ ಕೃತ್ಯಕ್ಕೆ ಬಳಸಲಾಗಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *