ಬೆಂಗಳೂರು: ಕರ್ನಾಟಕದಲ್ಲಿ ಸುವ್ಯವಸ್ಥಿತ ಚುನಾವಣೆಗಾಗಿ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್‍ಗಳ ಮಟ್ಟ ಹಾಕಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಸುವ್ಯವಸ್ಥಿತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾದ ರೌಡಿಗಳ ಮೇಲೆ ಗೂಂಡಾ ಕಾಯಿದೆ ಅಸ್ತ್ರವನ್ನು ಪೊಲೀಸರು ಪ್ರಯೋಗಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕ್ರಿಮಿನಲ್‍ಗಳನ್ನ ಗೂಂಡಾ ಕಾಯ್ದೆ ಅಡಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆಯೇ ರೌಡಿ ಶೀಟರ್ ವೆಂಕಟೇಶ್, ರವಿಕುಮಾರ್ ಅಲಿಯಾಸ್ ಗುಂಡ ರವಿ, ಶಕ್ತಿಪ್ರಸಾದ್ ಅಲಿಯಾಸ್ ಶಕ್ತಿ ಸೇರಿದಂತೆ ಹಲವು ರೌಡಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನು ಹೊರಗಡೆ ಉಳಿದಿರುವ ಪುಡಿರೌಡಿಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆ ಆದೇಶಿಸಿದೆ.