ಬೆಂಗಳೂರು: ಬುದ್ಧಿ ಮಾತು ಹೇಳಿದ್ದಕ್ಕೆ ಮನೆ ಮುಂದೆ ಇದ್ದ ಬೈಕ್‍ಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮೆರೆದಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
ದೊಡ್ಡಣ್ಣ ಲೇಔಟ್‍ನಲ್ಲಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಕಲೀಂ ಪಾಷ, ಮುಜಾಯಿದ್, ತೌಸಿಫ್, ತಬರೇಜ್ ಮತ್ತು ಶಾಹಿದ್ ಬಂಧಿತ ಆರೋಪಿಗಳು. ಬಂಧಿತರು ಇಂದು ಬೆಳಗಿನ ಜಾವ ಮೂರು ಬೈಕ್‍ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಹೀಗಾಗಿ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಯುವಕರ ಗುಂಪೊಂದು ಆಂಟಿಯ ಹಿಂದೆ ಪ್ರೀತ್ಸೆ, ಪ್ರೀತ್ಸೆ ಎಂದು ಫಾಲೋ ಮಾಡುತ್ತಿದ್ದರು. ಬಳಿಕ ಆಂಟಿಗೆ ದೈಹಿಕ ಸಂಪರ್ಕ ಬೆಳಸುವಂತೆ ಒತ್ತಾಯಿಸುತ್ತಿದ್ದರು. ಇದಕ್ಕಾಗಿ ಆ ಏರಿಯಾದಲ್ಲಿ ಆಟೋವೊಂದರಲ್ಲಿ ಕುಳಿತು ಗಲಾಟೆ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಚುಡಾಯಿಸುತ್ತಿದ್ದರು.
ಅದೇ ರೀತಿ ಗುರುವಾರ ಸಂಜೆ ಅದೇ ಏರಿಯಾದ ಮಹಿಳೆಯನ್ನು ಚುಡಾಯಿಸಿದ್ದರು. ಈ ವೇಳೆ ಮಹಿಳೆ ಯುವಕರಿಗೆ ಬೈದು ಬುದ್ಧಿವಾದ ಹೇಳಿದ್ದರು. ಜೊತೆಗೆ ಅಲ್ಲಿನ ಮಹಿಳೆಯರು ಪೊಲೀಸರಿಗೆ ದೂರು ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದರು. ಅಷ್ಟಕ್ಕೇ ಕೋಪಗೊಂಡ ಯುವಕರ ಗ್ಯಾಂಗ್ ಇಂದು ನಸುಕಿನ ಜಾವ ಸುಮಾರು 3:30ರ ವೇಳೆಯಲ್ಲಿ ಮಹಿಳೆಯ ಮನೆ ಬಳಿ ಬಂದಿದ್ದಾರೆ. ನಂತರ ಮನೆ ಮುಂದೆ ನಿಲ್ಲಿಸಿದ್ದ ಮಹಿಳೆಯ ಬೈಕ್ ಸೇರಿದಂತೆ ಮೂರು ಬೈಕ್‍ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಈ ಕುರಿತು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಮಾಡಿ ಐವರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]