ಕುಡಿದ ಮತ್ತಿನಲ್ಲಿ ಮಚ್ಚಾ ಎಂದಿದ್ದಕ್ಕೆ ಜೋಡಿ ಕೊಲೆ – ಆರೋಪಿಗಳ ಬಂಧನ

Public TV
2 Min Read

ಆನೇಕಲ್: ಇಡೀ ಆನೇಕಲ್ ಭಾಗವನ್ನೇ ಬೆಚ್ಚಿ ಬೀಳಿಸಿದ್ದ ನಿಗೂಢ ಜೋಡಿ ಕೊಲೆಯನ್ನು ಇದೀಗ ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ಸೇವಿಸಿದ ಮತ್ತಿನಲ್ಲಿ ಮಚ್ಚಾ ಎಂದಿದ್ದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಸಿಂಗೇನ ಅಗ್ರಹಾರದ ನೀಲಗಿರಿ ತೋಪಿನ ಸಂಪಿಗೆ ನಗರದ ನಿವಾಸಿ ರವಿಕುಮಾರ್ ಹಾಗೂ ಕೋಲ್ಕತ್ತಾ ಮೂಲದ ಚಂದನ್ ದಾಸ್ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಘಟನೆ ತಾಲೂಕಿನಾದ್ಯಂತ ಸಂಚಲನ ಮೂಡಿಸಿತ್ತು. ಹೆಬ್ಬಗೋಡಿ ಸಿಐ ಗೌತಂ ತಂಡ ಕೊಲೆಗೂ ಮುನ್ನ ನಡೆದ ಘಟನಾವಳಿಗಳ ಹಿಂದೆ ಬಿದ್ದಿದ್ದಾರೆ. ಈ ಹಿನ್ನೆಲೆ ಶವಗಳ ನಡುವೆ ಇದ್ದ ಮದ್ಯದ ಬಾಟಲಿಗಳನ್ನು ಎಲ್ಲಿಂದ ತಂದಿದ್ದಾರೆ ಎಂದು ಹುಡುಕುತ್ತಾ ಹೋಗಿದ್ದಾರೆ. ಆಗ ಬಾರ್ ಕಂಡುಹಿಡಿದಿದ್ದು, ಆ ಮೂಲಕ ಸಿಸಿಟಿವಿಯನ್ನು ನೋಡಿ ಕೊಲೆಗಾರರ ಸುಳಿವನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಯ ಕೊಲೆ ಯತ್ನ ಪ್ರಕರಣ – ಪ್ರಮುಖ ಆರೋಪಿಯ ಬಂಧನ

ನಡೆದಿದ್ದೇನು?
ರವಿಕುಮಾರ್, ಚಂದನ್ ದಾಸ್ ಮತ್ತು ದಾರುಲ್ ಆಲಂ ಕುಡಿಯಲು ಆರಂಭಿಸಿದ್ದಾರೆ. ಈ ವೇಳೆ ಇನ್ನೂ ಎಣ್ಣೆ ಬೇಕು ಎಂದು ಅಬ್ಸುಲ್ ಕರೀಂ ಅವರನ್ನು ಮದ್ಯ ತರಲು ರವಿ ಬೈಕ್‍ನಲ್ಲಿ ಕಳುಹಿಸಿದ್ದಾರೆ. ಬಾರ್ ನಿಂದ ಎಣ್ಣೆ ತಂದ ಕರೀಂ, ರವಿಕುಮಾರ್ ಗೆ ‘ತಗೋ ಮಚ್ಚಾ’ ಎಂದಿದ್ದೇ ತಡ ಕರೀಂ ಮೇಲೆ ಹಿಗ್ಗಾಮುಗ್ಗ ರವಿಕುಮಾರ್ ಮುಗಿಬಿದ್ದು ಹೊಡೆದಿದ್ದಾರೆ. ಇರುವ ನಾಲ್ವರಲ್ಲಿ ದಾಸ್ ರವಿಗೆ ಸಾಥ್ ನೀಡಿದ್ರೆ, ಆಲಂ ಕರೀಂಗೆ ಸಾಥ್ ನೀಡಿ ರವಿ ಮತ್ತು ದಾಸ್ ನನ್ನು ಮುಗಿಸಿ ಕರೀಂ ಮತ್ತು ಆಲಂ ಪರಾರಿಯಾಗಿದ್ದಾರೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ ಕೋಳಿ ಪಂದ್ಯ ಪ್ರಕರಣ – ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಹಿಂದೇಟು

ಈ ಹಿನ್ನೆಲೆ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದಿದ್ದು, ಐಜಿಪಿ ಚಂದ್ರಶೇಖರ್, ಎಸ್ಪಿ ವಂಶಿಕೃಷ್ಣ, ಎಎಸ್ಪಿ ಲಕ್ಣ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್ ಆದಿಯಾಗಿ ಎಲ್ಲ ಆನೇಕಲ್ ಉಪವಿಭಾಗದ ಇನ್ಸ್‍ಪೆಕ್ಟರ್ ಗಳ ದಂಡು ಈ ಕೊಲೆ ಪ್ರಕರಣ ಭೇದಿಸಲು ಇಳಿದಿತ್ತು. ಇದನ್ನೂ ಓದಿ: ಕರಿಯಮ್ಮದೇವಿಯ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಹೊತ್ತೊಯ್ದ ಖದೀಮರು

ಅಸ್ಸಾಂನ ಅಬ್ಸುಲ್ ಕರೀಂ(22) ಮತ್ತು ದಾರುಲ್ ಆಲಂ(23) ಕೊಲೆ ಮಾಡಿ ವಿಮಾನದ ಮೂಲಕ ಅಸ್ಸಾಂ ತೆರಳುವ ಸಿದ್ಧತೆಯಲ್ಲಿದ್ದರು. ಇದನ್ನು ತಿಳಿದ ಪೊಲೀಸರು ಅವರು ವಿಮಾನ ಹತ್ತುವ ಮುನ್ನವೇ ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *