ಬೆಂಗಳೂರು: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳನ್ನೇ ಕೊಲೆ ಮಾಡಿದ ಮಲತಂದೆಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ದರ್ಶನ್ ಕೊಲೆ ಮಾಡಿದ ಆರೋಪಿ. ಶುಕ್ರವಾರ (ಅ.24) ಸಂಜೆ ಕುಂಬಳಗೋಡಿನ ರಾಮಸಂದ್ರದಲ್ಲಿ ಈ ಘಟನೆ ನಡೆದಿತ್ತು. ಸದ್ಯ ಆರೋಪಿಯ ಜಾಡು ಹಿಡಿದು ಬಂಧಿಸಿರುವ ಪೊಲೀಸರಿಗೆ ಕೊಲೆಯ ಸ್ಫೋಟಕ ವಿಚಾರಗಳು ಗೊತ್ತಾಗಿದೆ. ಇದನ್ನೂ ಓದಿ: ದೆಹಲಿ ವಿವಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಕೇಸ್‌ಗೆ ಟ್ವಿಸ್ಟ್ – ಸುಳ್ಳು ಕಥೆ ಕಟ್ಟಿದ ತಂದೆ ಅರೆಸ್ಟ್
ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಬಾಲಕಿ ಸಿರಿಯ ತಾಯಿ ಶಿಲ್ಪಾಳನ್ನ ದರ್ಶನ್ ಎರಡನೇ ಮದುವೆಯಾಗಿದ್ದ. ಬಳಿಕ ದರ್ಶನ್ ತನ್ನ ಪ್ರೈವಸಿಯ ಬಗ್ಗೆ ತಲೆಕೆಡಿಸಿಕೊಂಡಿದ್ದ. ಹೀಗಾಗಿ ಆರೋಪಿಯು ಬಾಲಕಿಯ ಅಜ್ಜಿ ಇರೋತನಕ ಯಾವುದೇ ಕಿರಿಕ್ ಮಾಡುತ್ತಿರಲಿಲ್ಲ. ಆದರೆ ಆಕೆಯ ಅಜ್ಜಿ ಇತ್ತೀಚೆಗೆ ಮೃತಪಟ್ಟಿದ್ದರು.
ಬಳಿಕ ತನ್ನ ಬುದ್ಧಿ ತೋರಿಸಲು ಶುರು ಮಾಡಿದ ದರ್ಶನ್, ಬಾಲಕಿಗೆ ಹೊಡೆದು ಬಡಿದು ಚಿತ್ರಹಿಂಸೆ ಕೊಡ್ತಿದ್ದ. ನಾಲ್ಕು ದಿನಗಳ ಹಿಂದೆ ಮನೆಗೆ ಬಂದಾಗ ಆರೋಪಿ ಬಾಲಕಿಯನ್ನ ಕೊಲೆ ಮಾಡಿದ್ದ. ಬಾಲಕಿಯನ್ನ ಕೊಲೆ ಮಾಡಿದ್ದಲ್ಲದೆ ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದ. ಆದರೆ ಅದೇ ವೇಳೆ ಶಿಲ್ಪಾ ಮನೆಗೆ ಬಂದಿದ್ದರಿಂದ ಗಾಬರಿಯಾದ ದರ್ಶನ್, ಆಕೆಯನ್ನ ರೂಮಿನಲ್ಲಿ ಕೂಡಿ ಹಾಕಿ ಎಸ್ಕೇಪ್ ಆಗಿದ್ದ.
ಪೊಲೀಸರು ಆತನ ಬೆನ್ನು ಬಿದ್ದು, ನೆಲಮಂಗಲ ಬಳಿ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಪ್ರೈವಸಿ ತೊಂದರೆಯಿಂದಲೇ ದರ್ಶನ್ ಬಾಲಕಿಯನ್ನು ಕೊಲೆ ಮಾಡಿರೋದು ಗೊತ್ತಾಗಿದೆ. ಪೊಲೀಸರು ಆತನನ್ನು ತೀವ್ರ ವಿಚಾರಣೆ ಒಳಪಡಿಸಿದ್ದು, ಮತ್ತಷ್ಟು ವಿಚಾರ ಬಯಲಾಗಲಿದೆ.
