ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮ್ಯೂಸಿಕ್ ಮೈಲಾರಿ ಸೇರಿ 7 ಜನರ ವಿರುದ್ಧ ಪೋಕ್ಸೊ ಕೇಸ್

1 Min Read

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದೇ ಹೆಸರಾಗಿರುವ ಜನಪದ ಸಿಂಗ್ ಮೈಲಾರಿ (Music Mailari) ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದೂರು ದಾಖಲಾಗಿದೆ.

ಮ್ಯೂಸಿಕ್ ಮೈಲಾರಿ ಉತ್ತರ ಕರ್ನಾಟಕ ಜನಪದ ಸಿಂಗರ್. ಯ್ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಹೆಸರಾಗಿದ್ದಾನೆ. ಈತನ ಮೇಲೆ ಮಹಾಲಿಂಗಪುರ ಹೊರವಲಯದ ಲಾಡ್ಜ್ ಒಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದಲ್ಲಿ ಅ.24 ರಂದು ಹನುಮಂತ ದೇವರ ಓಕುಳಿ ಕಾರ್ಯಕ್ರಮವಿತ್ತು. ಅಂದು ಊರಲ್ಲಿ ಆರ್ಕೆಷ್ಟ್ರಾ ಆಯೋಜಿಸಲಾಗಿತ್ತು. ಅಲ್ಲಿ ಹಾಡಲು ಮೈಲಾರಿ ಬಂದಿದ್ದ. ಅದೇ ಆರ್ಕೆಷ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಅಪ್ರಾಪ್ತೆ ಬಂದಿದ್ದಳು. ಈ ಅವಧಿಯಲ್ಲಿ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸೈಕಲ್‌ ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಸಾವು

ಅತ್ಯಾಚಾರ ಮಾಡಿ ವಿಡಿಯೊ ಮಾಡಿದ್ದಾರೆ ಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ. ಡಿ.14 ರಂದು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿ.15 ರಂದು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದೆ. ಪೋಕ್ಸೊ ಅಡಿ ಎಫ್‌ಐಆರ್ ದಾಖಲಾಗಿದೆ. ಮ್ಯೂಸಿಕ್ ಮೈಲಾರಿ, ಶಂಕರ್ ಅಥಣಿ, ಸಿಂಗರ್ ದಾನವಿ, ಬೆಂಕಿ ಲತಾ, ಸಿಂಗರ್ ರುಕ್ಮಿಣಿ, ಡಿಜೆ ಮಹಾಂತೇಶ್ ಸೇರಿ ಏಳು ಜನರ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ.

ಮೈಲಾರಿ ಇತ್ತೀಚೆಗೆ ಹಾಡಿದ್ದ ‘ಬಾಗಲಕೋಟೆ ಬಸ್ ಸ್ಟ್ಯಾಂಡ್ ನ್ಯಾಗ ನಿಂತಾಳ ಕಡಿಬಿಡಿಕಿ’ ಎಂಬ ಹಾಡು ಉತ್ತರ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿತ್ತು. ಹೀಗಾಗಿ, ಆತ ಆ ಭಾಗದ ಟ್ರೆಂಡಿಂಗ್ ಸ್ಟಾರ್ ಎಂದೇ ಖ್ಯಾತನಾಗಿದ್ದ. ಆದರೆ, ಈಗ ಆತನ ಮೇಲೆ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡು, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಆರ್ಯನ್‌ ಖಾನ್‌ ಬಂದಿದ್ದ, ಶಿಲ್ಪಾ ಶೆಟ್ಟಿ ಒಡೆತನದ ಪಬ್‌ಗಳ ವಿರುದ್ಧ FIR

Share This Article